ಸ್ಫೋಟದ ಸ್ಟಂಟ್ ದೃಶ್ಯ 
ಸಿನಿಮಾ ಸುದ್ದಿ

`ಸ್ಪೆಕ್ಟರ್' ಸ್ಫೋಟಕ್ಕೆ ಗಿನ್ನೆಸ್ ಗೌರವ

ಪ್ರೇಮ್ ರತನ್ ಧನ್ ಪಾಯೋ' ಸಿನಿಮಾದ ಹವಾ ನಿಂತ ಮೇಲೆ ಭಾರತದಲ್ಲಿ ಬಿಡುಗಡೆಗೊಳ್ಳಲು ಕಾಯುತ್ತಿರುವ `ಸ್ಪೆಕ್ಟರ್...

ಸಲ್ಮಾನ್‍ಖಾನ್‍ನ ಸಿನಿಮಾ ಅಂದ್ರೆ ಎಲ್ಲರಿಗೂ ನಡುಕ. ಹಾಲಿವುಡ್‍ನ ಜೇಮ್ಸ್ ಬಾಂಡ್‍ಗೂ!

`ಪ್ರೇಮ್ ರತನ್ ಧನ್ ಪಾಯೋ' ಸಿನಿಮಾದ ಹವಾ ನಿಂತ ಮೇಲೆ ಭಾರತದಲ್ಲಿ ಬಿಡುಗಡೆಗೊಳ್ಳಲು ಕಾಯುತ್ತಿರುವ `ಸ್ಪೆಕ್ಟರ್' ಈಗಾಗಲೇ ವಿದೇಶದ ಬೇರೆ ಬೇರೆ ಕಡೆ ಬಿಡುಗಡೆ ಕಂಡಿದೆ. 

ಭಾರತದಲ್ಲಿ ನವೆಂಬರ್ 20ಕ್ಕೆ ಬಿಡುಗಡೆ ಆಗುತ್ತೆ ಎಂಬ ಮಾಹಿತಿಯಿದೆ. ಆದರೆ, ಇದಕ್ಕೂ ಮುನ್ನ 24ನೇ ಈ ಬಾಂಡ್ ಸಿನಿಮಾ ಗಿನ್ನೆಸ್ ದಾಖಲೆ ಬರೆದುಬಿಟ್ಟಿದೆ! 2 ವಾರದಲ್ಲಿ 300 ಮಿಲಿಯನ್ ಡಾಲರ್ ಸಂಪಾದಿಸಿದ ವಿಚಾರ ಅಲ್ಲ ಇದು. ಈ ಸಿನಿಮಾದಲ್ಲಿ ಅತಿ ದೀರ್ಘದ ಸ್ಫೋಟ ದೃಶ್ಯ ಈಗ ಗಿನ್ನೆಸ್ ದಾಖಲೆ ಬರೆದಿದೆ. 

ಈ ಸ್ಫೋಟದ ಸ್ಟಂಟ್ ದೃಶ್ಯ ನಡೆದಿದ್ದು ಮೊರಾಕ್ಕೋದ ಎರ್ಫೌಡ್ ನಲ್ಲಿ. ಸ್ಫೋಟವನ್ನು ಸೃಷ್ಟಿಸಲು 8418 ಲೀಟರ್ ತೈಲ ಮತ್ತು 33 ಕೆಜಿ ಸ್ಫೋಟಕಗಳನ್ನು ಬಳಸಿಕೊಳ್ಳಲಾಗಿತ್ತು.

ಸಿನಿಮಾದಲ್ಲಿ ಮಾ್ಯಡೆಲಿನ್ ಸ್ವ್ಯಾನ್‍ಳನ್ನು (ಲಿಯಾ ಸೆಡೌಕ್ಸ್) ಜೇಮ್ಸ್ ಬಾಂಡ್ (ಡೇನಿಯಲ್ ಕ್ರೇಗ್) ಭೇಟಿ ಆಗುವ ಸನ್ನಿವೇಶದಲ್ಲಿ ಈ ಸ್ಫೋಟ ಬರುತ್ತದೆ. `ಸ್ಪೆಕ್ಟರ್'ನ ಪೊ್ರಡಕ್ಷನ್ ಡಿಸೈನರ್ ಕ್ರಿಸ್ ಕಾರ್ಬೌಲ್ಡ್ ಈ ದೃಶ್ಯದ ನಿರ್ಮಾಣಕ್ಕೆ ಕಾರಣರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ಊರಸವಳ್ಳಿಯಂತೆ ಬದಲಾಗ್ತಾರೇ: ಹಿಂದಿ ಬರಲ್ಲ ಅಂತ ಪೋಸ್ ಕೊಟ್ಟೋರು, ದೆಹಲಿಯ CJPಯಲ್ಲಿ ಹಿಂದಿಲೇ ಭಾಷಣ: ನೆಟ್ಟಿಗರು ಗರಂ, Video!

'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

'96 ' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ: ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್, Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video..