ನಟ ನಿರ್ದೇಶಕ ರಮೇಶ್ 
ಸಿನಿಮಾ ಸುದ್ದಿ

'ಉತ್ತಮ ವಿಲನ್' ನಂತರ ಈಗ ಗಣೇಶ್ ಚಿತ್ರ ನಿರ್ದೇಶಿಸಲಿರುವ ರಮೇಶ್

ಬಹುಭಾಷಾ ನಿರ್ಮಾಪಕರಾಗಿರುವ ರಾಕ್ಲೈನ್ ವೆಂಕಟೇಶ್ 'ಲಿಂಗಾ' ಸಿನೆಮಾದ ವಿವಾದಗಳನ್ನು ಹಿಮ್ಮೆಟ್ಟಿ 'ಭಜರಂಗಿ ಭಾಯಿಜಾನ್' ಸಿನೆಮಾದ ಯಶಸ್ಸು ಕಂಡು

ಬೆಂಗಳೂರು: ಬಹುಭಾಷಾ ನಿರ್ಮಾಪಕರಾಗಿರುವ ರಾಕ್ಲೈನ್ ವೆಂಕಟೇಶ್ 'ಲಿಂಗಾ' ಸಿನೆಮಾದ ವಿವಾದಗಳನ್ನು ಹಿಮ್ಮೆಟ್ಟಿ 'ಭಜರಂಗಿ ಭಾಯಿಜಾನ್' ಸಿನೆಮಾದ ಯಶಸ್ಸು ಕಂಡು ಮತ್ತೆ ಕನ್ನಡಕ್ಕೆ ಹಿಂದಿರುಗಿದ್ದಾರೆ.

ತೆಲುಗು ಸಿನೆಮಾ 'ಭಲೇ ಭಲೇ ಮಗಾಡಿವೋಯ್' ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ರಾಕ್ಲೈನ್, ನಿರ್ದೇಶನಕ್ಕೆ ರಮೇಶ್ ಅರವಿಂದ್ ಅವರನ್ನು ಒಪ್ಪಿಸಿದ್ದಾರೆ ಎನ್ನುತ್ತವೆ ಮೂಲಗಳು. ಗಣೇಶ್ ಈ ಸಿನೆಮಾದ ನಾಯಕ ನಟ. ರಮೇಶ್ ಒಪ್ಪಿಗೆ ನೀಡಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎನ್ನುತ್ತವೆ ಮೂಲಗಳು.

ಈ ಸಿನೆಮಾವನ್ನು ರಾಕ್ಲೈನ್ ಮತ್ತು ತೆಲುಗು ನಿರ್ಮಾಪಕ ಅಲ್ಲೂ ಅರವಿಂದ್ ಜಂಟಿಯಾಗಿ ನಿರ್ಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಯೋಜನೆಯಿಂದ ರಮೇಶ್ ಕೂಡ ನಿರ್ದೇಶಕನಾಗಿ ಕನ್ನಡಕ್ಕೆ ಹಿಂದಿರುಗಿದ್ದಾರೆ. ಇದಕ್ಕೂ ಮುಂಚೆ ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ಆಕ್ಸಿಡೆಂಟ್, ವೆಂಕಟ ಇನ್ ಸಂಕಟ ಮತ್ತು ನಮ್ಮಣ್ಣ ಡಾನ್ ಚಿತ್ರಗಳನ್ನು ನಿರ್ದೇಶಿಸಿದ್ದರು.

ಇದೇ ವರ್ಷ ರಮೇಶ್ ನಿರ್ದೇಶಿಸಿದ್ದ ಕಮಲ ಹಾಸನ್ ಅವರ 'ಉತ್ತಮ ವಿಲನ್' ವಿಮರ್ಶಕರ ಮೆಚ್ಚುಗೆ ಗಳಿಸಿತ್ತಾದರೂ ಗಲ್ಲಾಪೆಟಿಯಲ್ಲಿ ಮ್ಯಾಜಿಕ್ ಮಾಡಲು ವಿಫಲವಾಗಿತ್ತು. ಸದ್ಯಕ್ಕೆ ಟಿವಿ ವಾಹಿನಿಯೊಂದರಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡನೇ ಆವೃತ್ತಿಗೆ ನಟ ನಿರ್ದೇಶಕ ರಮೇಶ್ ಅಣಿಯಾಗುತ್ತಿದ್ದಾರೆ.

ನಟ ಗಣೇಶ್ ಸದ್ಯಕ್ಕೆ ಶಶಾಂಕ್ ನಿರ್ದೇಶನದ ಮುಂಗಾರು ಮಳೆ-೨ ಚಿತ್ರೀಕರಣಕ್ಕಾಗಿ ರಾಜಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್