ಭರ್ಜರಿ ಚಿತ್ರದಲ್ಲಿ ನಟ ದ್ರುವ ಮತ್ತು ನಿರ್ದೇಶಕ ಚೇತನ್ ಕುಮಾರ್ 
ಸಿನಿಮಾ ಸುದ್ದಿ

ನಿಗದಿಯಂತೆ "ಭರ್ಜರಿ" ಚಿತ್ರೀಕರಣ: ಚೇತನ್ ಕುಮಾರ್

ದ್ರುವ ಸರ್ಜಾ ಅಭಿನಯದ 3ನೇ ಚಿತ್ರ ಭರ್ಜರಿಯ ಚಿತ್ರೀಕರಣ ನಿಗದಿಯಂತೆಯೇ ನಡೆಯಲಿದೆ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ...

ಬೆಂಗಳೂರು: ದ್ರುವ ಸರ್ಜಾ ಅಭಿನಯದ 3ನೇ ಚಿತ್ರ ಭರ್ಜರಿಯ ಚಿತ್ರೀಕರಣ ನಿಗದಿಯಂತೆಯೇ ನಡೆಯಲಿದೆ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.

ಆರ್ ಎಸ್ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಕಳೆದ ಏಪ್ರಿಲ್ ನಲ್ಲಿ ಭರ್ಜರಿ ಚಿತ್ರದ ಮೂಹೂರ್ತ ನೆರವೇರಿತ್ತು. ಆ ಬಳಿಕ ಅದೇಕೋ ಚಿತ್ರ ತಂಡ ಮಾಧ್ಯಮಗಳಿಂದ ದೂರವುಳಿದಿತ್ತು.  ಗಾಂಧಿನಗರದ ಕೆಲವು ಗಾಸಿಪ್ ಗಳ ಪ್ರಕಾರ ಚಿತ್ರದ ನಿರ್ದೇಶಕರ ಚೇತನ್ ಕುಮಾರ್ ಮತ್ತು ನಾಯಕ ನಟ ದ್ರುವ ಸರ್ಜಾ ಅವರ ನಡುವಿನ ಬಿಕ್ಕಟ್ಟಿನಿಂದಾಗಿ ಚಿತ್ರದ ಚಿತ್ರೀಕರಣ  ನಿಧಾನವಾಗುತ್ತಿದೆ ಎಂದು ಹೇಳಲಾಗುತ್ತಿತ್ತಾದರೂ, ಇದೀಗ ಸ್ವತಃ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನಾನು ಮತ್ತು ನಟ ದ್ರುವ ಸರ್ಜಾ ಒಳ್ಳೆಯ ಸ್ನೇಹಿತರಾಗಿದ್ದು, ಭರ್ಜರಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೇವೆ. ದ್ರುವಗೆ ಇದು ಮೂರನೇ ಚಿತ್ರವಾಗಿದ್ದು, ಸತತ 2 ಯಶಸ್ಸು  ಕಂಡಿರುವ ದ್ರವ ಪಾಲಿಗೆ ಭರ್ಜರಿ ಹ್ಯಾಟ್ರಿಕ್ ಯಶಸ್ಸು ತಂದುಕೊಡಲಿದೆ. ಈ ನಿಟ್ಟಿನಲ್ಲಿ ನಾನು ಮತ್ತು ದ್ರುವ ಶ್ರಮಿಸುತ್ತಿದ್ದೇವೆ. ನಿಜ ಹೇಳಬೇಕು ಎಂದರೆ ನನ್ನ ಮತ್ತು ದ್ರುವ ನಡುನೆ  ಭಿನ್ನಾಭಿಪ್ರಾಯಗಳಿರುವುದು ನಿಜ. ಆದರೆ ಅದು ವೈಯುಕ್ತಿಕವಲ್ಲ. ಭರ್ಜರಿ ಚಿತ್ರದ ಬಗ್ಗೆ ಇರುವ ಭಿನ್ನಾಭಿಪ್ರಾಯವಷ್ಟೇ. ಚಿತ್ರದ ಹೊರತಾಗಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ವೃತ್ತಿಪರ  ವಿಚಾರಕ್ಕೆ ಬಂದಾಗ ಮಾತ್ರ ನಾವು ನಿಷ್ಠೂರರು. ಚಿತ್ರವನ್ನು ಉತ್ತಮಗೊಳಿಸಲು ಸುಮಾರು 18 ಬಾರಿ ಚಿತ್ರದ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಲಾಗಿದೆ.

ನಟ ಅರ್ಜುನ್ ಸರ್ಜಾ ಅವರ ಬಳಿ ಹೋಗಿ ಅವರ ಸಲಹೆ ಕೂಡ ಪಡೆಯಲಾಗಿದೆ. ಇದೀಗ ಚಿತ್ರದ ಅಂತಿಮ ಸ್ಕ್ರಿಪ್ಟ್ ಅನ್ನು ಅರ್ಜನ್ ಸರ್ಜಾ ಅವರು ಒಪ್ಪಿಕೊಂಡಿದ್ದು, ಚಿತ್ರದ ಚಿತ್ರೀಕರಣಕ್ಕೆ  ನಾವೆಲ್ಲರೂ ಸಿದ್ಧರಾಗಿದ್ದೇವೆ. ಇದೇ ವಿಜಯದಶಮಿ ಹಬ್ಬದ ದಿನದಂದು ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಚೇತನ್ ಕುಮಾರ್ ಹೇಳಿದರು.

ದಕ್ಷಿಣ ಭಾರತದ ಖ್ಯಾತನಟರಾಗಿರುವ ಅರ್ಜುನ್ ಸರ್ಜಾ ಅವರ ಕುಟುಂಬದ ಕುಡಿಯಾಗಿರುವ ದ್ರುವ ಸರ್ಜಾ ಎಪಿ ಅರ್ಜುನ್ ನಿರ್ದೇಶನದ ಅದ್ದೂರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ  ಪಾದಾರ್ಪಣೆ ಮಾಡಿದ್ದರು. ಬಳಿಕ ಇದೇ ಚೇತನ್ ಕುಮಾರ್ ನಿರ್ದೇಶನ ಬಹದ್ದೂರ್ ಚಿತ್ರದಲ್ಲಿ ಅಭಿನಯಿಸಿದ್ದ ದ್ರುವ ಸತತ 2 ಗೆಲುವು ಕಂಡರು. ಇದೀಗ ಭರ್ಜರಿ ಚಿತ್ರದ ಮೂಲಕ ನಟ ದ್ರುವ  ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ನಾಯಕ ನಟಿಯಾಗಿ ರಚಿತಾರಾಮ್ ಅವರು ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!