ಸಿನಿಮಾ ಸುದ್ದಿ

ಹರ್ಷಿಕಾ ಚಿತ್ತ ಬಾಲಿವುಡ್ ನತ್ತ: ಮಧುರ್ ಭಂಡಾರ್ಕರ್ ಚಿತ್ರದಲ್ಲಿ ನಟನೆ?

Shilpa D

ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ನಟಿ ಬಾಲಿವುಡ್ ಗೆ ಹಾರೋದಕ್ಕೆ ರೆಡಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮುಂಬೈಗೆ ತೆರಳಿದ್ದ ಹರ್ಷಿಕಾ ಸ್ಪೆಷಲ್ ಫೋಟೋ ಶೂಟ್ ಒಂದನ್ನು ಮಾಡಿಸಿಕೊಂಡು ಬಂದಿದ್ದರು.

ಇನ್ನು ಮಧುರ್ ಜೊತೆ ಹರ್ಷಿಕಾ ಮಾತುಕತೆ ಕೂಡ ನಡೆಸಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಒಂದು ವೇಳೆ ಇವೆಲ್ಲಾ ನಿಜವೇ ಆದ್ರೆ ಹರ್ಷಿಕಾ ಬಾಲಿವುಡ್ ನಲ್ಲೂ ಕನ್ನಡದ ಕಂಪು ಸೂಸಲಿದ್ದಾಳೆ. ಇದಕ್ಕೆ ಪುಷ್ಟಿ ನೀಡುವಂತೆ ಹರ್ಷಿಕಾ ಸಾಮಾಜಿಕ ಜಾಲತಾಣವೊಂದರಲ್ಲಿ ಮಧುರ್ ಭಂಡಾರ್ಕರ್ ಜೊತೆ ಇರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಕನ್ನಡದ ಕೆಲ ನಟಿಯರು ಹಾಗೂ ನಟರು ಈಗಾಗಲೇ ಬಾಲಿವುಡ್ ನ ಕೆಲ ಸಿನಿಮಾಗಳಲ್ಲಿ ತಮ್ಮ ಖದರ್ ತೋರಿಸಿದ್ದಾರೆ. ನಟ ಸುದೀಪ್ , ದಿಗಂತ್, ಡೈಸಿ ಬೋಪಣ್ಣ, ಭಾವನಾ ಹೀಗೆ ಅನೇಕರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಹರ್ಷಿಕಾ ಪೂಣಚ್ಚ ಸರದಿ.

SCROLL FOR NEXT