ಸಿನಿಮಾ ಸುದ್ದಿ

'ರಿಂಗ್ ಮಾಸ್ಟರ್' ನ ಸ್ಫೂರ್ತಿ ಏನು?

Guruprasad Narayana

ಬೆಂಗಳೂರು: ಚೊಚ್ಚಲ ನಿರ್ದೇಶಕ ವಿಶೃತ್ ನಾಯಕ್ ಪ್ರವಾಸ ಏಜನ್ಸಿ ನಡೆಸುತ್ತಾರೆ. ಸಣ್ಣ ಸ್ಫೂರ್ತಿಯಿಂದ ಬೆಳೆದ ಐಡಿಯಾ ದೊಡ್ಡದಾಗಿ ಈಗ 'ರಿಂಗ್ ಮಾಸ್ಟರ್' ರೂಪದಲ್ಲಿ ಪೂರ್ಣ ಪ್ರಮಾಣದ ಚಿತ್ರವಾಗಿ ಬೆಳೆದಿದೆ.

ಆದರೆ ಇದು ಹಾಲಿವುಡ್ ಸಿನೆಮಾದ ನಕಲು ಎಂಬ ಆರೋಪ ಕೇಳಿ ಬರುತ್ತಿದ್ದು ಇದು ನಿರ್ದೇಶ ವಿಶೃತ್ ಗೆ ಬೇಸರ ತಂದಿದೆಯಂತೆ. ಇದನ್ನು ಅಲ್ಲಗೆಳೆಯುವ ಅವರು "ಯಾವುದರಿಂದಾದರೂ ಸ್ಫೂರ್ತಿ ತೆಗೆದುಕೊಳ್ಳುವುದು ಅನೈತಿಕ ಅಲ್ಲ. ನಾನು ಶಾರ್ಟ್ ಸಿನೆಮಾ 'ಮಿಸ್ ಬಿಹೇವಿಯರ್' ನಿಂದ ಸ್ಫೂರ್ತಿಗೊಂಡಿದ್ದು ನಿಜ, ಆದರೆ ಹಾಲಿವುಡ್ಡಿನಲ್ಲಿ ಈ ರೀತಿಯ ಯಾವ ಸಿನೆಮಾವನ್ನು ನಾನು ನೋಡಿಲ್ಲ" ಎನ್ನುತ್ತಾರೆ.

ಅರುಣ್ ಸಾಗರ್ ಮತ್ತು ಅನುಶ್ರೀ ನಟನೆಯ 'ರಿಂಗ್ ಮಾಸ್ಟರ್' ವಿನೂತನವಾಗಿ ಹೇಳಿರುವ ಕಥೆ ಎನ್ನುತ್ತಾರೆ ವಿಶೃತ್. "ಸ್ವಾತಂತ್ರ್ಯ ಮತ್ತು ಅದರ ದುರ್ಬಳಕೆಯ ನಡುವೆ ಸಣ್ಣ ಗೆರೆಯಿದೆ. ಇದೇ ಸಿನೆಮಾದ ಮುಖ್ಯ ಎಳೆ" ಎನ್ನುತ್ತಾರೆ.

ತಮ್ಮ ಪ್ರವಾಸ ಏಜನ್ಸಿಯಲ್ಲಿ ಭೇಟಿ ಮಾಡಿದ ಹಲವು ಜನರು ಈ ಸಿನೆಮಾದ ಸ್ಕ್ರಿಪ್ಟ್ ಗೆ ಸ್ಫೂರ್ತಿ ನೀಡಿದ್ದಾರೆ ಎನ್ನುವ ವಿಶೃತ್, ತಮ್ಮ ಪತ್ನಿ ಮೇಘನಾ ಜೋಯಿಸ್ ಅವರ ಸಹಕಾರವನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ. "ನಾನು ಸಾಕಷ್ಟು ಕಥೆಗಳನ್ನು ಓದುತ್ತಿದ್ದೆ ಮತ್ತು ನನಗೆ ಬರೆಯುವುದರಲ್ಲಿರುವ ಆಸಕ್ತಿಯನ್ನು ತಿಳಿದ ನನ್ನ ಪತ್ನಿ ನನ್ನ ಆಸಕ್ತಿಯನ್ನು ಅನುಸರಿಸುವುದಕ್ಕೆ ನೂಕಿದ್ದಲ್ಲದೆ, ಬೆನ್ನಿಗೆ ನಿಂತು ಸಹಕರಿಸಿದರು" ಎನುತ್ತಾರೆ.

SCROLL FOR NEXT