ನಟರಾಜ ಸರ್ವೀಸ್ ಚಿತ್ರದ ದೃಶ್ಯ
ಶರಣ್ ಅಭಿನಯದ ನಟರಾಜ ಸರ್ವಿಸ್ ಚಿತ್ರ ಜನರ ಗಮನ ಸೆಳೆಯಲು ತಂತ್ರ ರೂಪಿಸಿರುವ ಚಿತ್ರತಂಡ ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದ ಜೊತೆಗೆ ಟ್ರೈಲರ್ ನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಈ ವರ ಮಹಾಲಕ್ಷ್ಮಿ ಹಬ್ಬಕ್ಕೆ ಕೋಟಿಗೊಬ್ಬ-2 ವಿಶ್ವಾದ್ಯಂತ ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು,ಇದರ ಜೊತೆ ನಟರಾಜ್ ಸರ್ವಿಸ್ ಚಿತ್ರದ ಟ್ರೈಲರ್ ಥಿಯೇಟರ್ ಗಳಲ್ಲಿ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.
ನಟರಾಜ ಸರ್ವಿಸ್ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಚಿತ್ರದ ಹಾಡುಗಳಿಗೆ ಪ್ರೇಕ್ಷಕರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಗೆ ಥ್ರಿಲ್ ಆಗಿದ್ದಾರೆ.
ಅನೂಪ್ ಸೀಳಿನ್ ಅವರ ಸಂಗೀತ ಸೂಪರ್ ಹಿಟ್ ಆಗಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಹಾಡಿರುವ ಹಾಡು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಶರಣ್ ಮತ್ತು ಮಯೂರಿ ಅಭಿನಯದ ಕಾಮಿಡಿ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಖಂಡಿತಾ ಯಶಸ್ವಿಯಾಗುತ್ತದೆ. ಈ ತಿಂಗಳಾಂತ್ಯಕ್ಕೆ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ ಎನ್ನುತ್ತಾರೆ ಪವನ್ ಒಡೆಯರ್.
ಪುನೀತ್ ರಾಜ್ ಕುಮಾರ್ ಅರ್ಪಿಸುವ, ಎನ್ ಎಸ್ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಅರುಲ್ ಕೆ.ಸೋಮಸುಂದರಮ್ ಅವರ ಛಾಯಾಗ್ರಹಣವಿದೆ.