ಸಿನಿಮಾ ಸುದ್ದಿ

ಚಿತ್ರೋದ್ಯಮದಲ್ಲಿ ಯಾವುದೇ ಜನಾಂಗೀಯ ನಿಂದನೆ ಇಲ್ಲ: ನವಾಜುದ್ದೀನ್

Guruprasad Narayana
ಮುಂಬೈ: ಬಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ನವಾಜುದ್ದೀನ್ ಸಿದ್ಧಿಕಿ, 'ಜನಾಂಗೀಯ ನಿಂದನೆ' ಇಲ್ಲದ ಒಂದು ಸ್ಥಳ ಎಂದರೆ ಸಿನೆಮಾ ರಂಗ ಎಂದಿದ್ದಾರೆ. 
"ಚಿತ್ರೋದ್ಯಮದಲ್ಲಿ ಯಾವುದೇ ಜನಾಂಗೀಯ ನಿಂದನೆ ಇಲ್ಲ ಎಂಬುದು ನನ್ನ ಅಭಿಮತ. ಅವರಿಗೆ ಪ್ರತಿಭೆಗಳು ಬೇಕಷ್ಟೆ, ಇಲ್ಲಿಗೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ ಆದರೆ ನೀವು ಪ್ರತಿಭಾನ್ವಿತರಾಗಿದ್ದರೆ ನಿಮಗೆ ಸಿಗಬೇಕಾದ ಗೌರವ ಸಿಗುತ್ತದೆ. ಈ ಉದ್ದಿಮೆಯ ಭಾಗವಾಗಿರುವುದಕ್ಕೆ ನಾನು ಧನ್ಯ" ಎಂದು ನವಾಜುದ್ದೀನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ಶೋಬಿಜ್ ನಲ್ಲಿ ನವಾಜುದ್ದೀನ್ ಇದ್ದರೆ ಸಿನೆಮಾದ ಬೆಲೆ ಹೆಚ್ಚುತ್ತದೆ ಎಂದು ಚಿತ್ರರಂಗದಲ್ಲಿ ಇತ್ತೀಚಿಗೆ ನಂಬಲಾಗಿದ್ದರು, ಇಂತಹ ವಿಷಯಗಳ ಬಗ್ಗೆ ನಾನು ಸಮಯ ವ್ಯರ್ಥ ಮಾಡುವುದಿಲ್ಲ ಎಂದಿದ್ದಾರೆ ಸಿದ್ಧಿಕಿ. 
"ನಾನು ಇಂತಹ ವಿಷಯಗಳ ಮೇಲೆ ಸಮಯಾಹರಣ ಮಾಡುವುದಿಲ್ಲ (ನಾನಿದ್ದರೆ ಮಾರುಕಟ್ಟೆ ಬೆಲೆ ಹೆಚ್ಚುತ್ತದೆ ಎಂಬಂತಹ ಮಾತುಗಳ ಬಗ್ಗೆ). ನನಗೆ ಈ ವಿಷಯಗಳ ಬಗ್ಗೆ ಚಿಂತಿಸಲು ಸಮಯವೂ ಇಲ್ಲ. ಕಷ್ಟ ಪಟ್ಟು ಕೆಲಸ ಮಾಡುವುದು ಮತ್ತು ನನ್ನ ಪಾತ್ರದ ಜೊತೆಗೆ ಪ್ರಾಮಾಣಿಕವಾಗಿರುವುದು ನನ್ನ ಕೆಲಸ ಮತ್ತು ಅದು ನನ್ನ ನಿಯಂತ್ರಣದಲ್ಲಿರುತ್ತದೆ. ನಾನು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನಷ್ಟೆ" ಎಂದು 'ಬ್ಲಾಕ್ ಫ್ರೈಡೆ', 'ಗಾಂಗ್ಸ್ ಆಫ್ ವಸೀಪುರ', 'ಕಹಾನಿ', 'ರಮಣ್ ರಾಘವ್ 2.0' ಮುಂತಾದ ಸಿನೆಮಾಗಳಲ್ಲಿ ನಟಿಸಿ ಮನೆಮಾತಾಗಿರುವ ಸಿದ್ಧಿಕಿ ಹೇಳಿದ್ದಾರೆ. 
ನಟ ಸದ್ಯಕ್ಕೆ ಸೊಹೈಲ್ ಖಾನ್ ನಿರ್ದೇಶನದ 'ಫ್ರೀಕಿ ಅಲಿ' ಸಿನೆಮಾದ ನಟನೆಯಲ್ಲಿ ನಿರತರಾಗಿದ್ದಾರೆ. 
SCROLL FOR NEXT