ಸಿನಿಮಾ ಸುದ್ದಿ

ಮಹತ್ತರವಾದದ್ದನ್ನು ಸಾಧಿಸಬಲ್ಲೆ ಎಂದು ನಿರ್ದೇಶಕರು ನಂಬಿದ್ದಾರೆ: ನಟಿ ಅಮೃತಾ

Guruprasad Narayana
ಬೆಂಗಳೂರು: 'ಮಂಡ್ಯ ಟು ಮುಂಬೈ' ಸಿನೆಮಾದ ಮೂಲಕ ಅಮೃತಾ ರಾವ್ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಜಶೇಖರ್ ನಿರ್ದೇಶನದ ಈ ಸಿನೆಮಾ ತಮಿಳಿನ 'ರೇನಿಗುಂಟಾ'ದ ರಿಮೇಕ್ ಆಗಿದ್ದು, ಅಮೃತಾ, ರಾಕೇಶ್ ಅಡಿಗ ಎದುರು ನಟಿಸುತ್ತಿದ್ದಾರೆ. 
ತಮ್ಮ ಮೊದಲ ಸಿನೆಮಾ ಕೊನೆಗೂ ಬಿಡುಗಡೆಗೆ ಸಿದ್ಧವಾಗಿರುವುದಕ್ಕೆ ಉತ್ಸುಕರಾಗಿರುವ ನಟಿ ಅಮೃತಾ "ಕಿವುಡಿ ಮಾತು ಮೂಕಿಯಾಗಿರುವ ೧೬ ವರ್ಷದ ಹುಡುಗಿಯ ಪಾತ್ರದಲ್ಲಿ ನಾನು ನಟಿಸಬೇಕಿತ್ತು. ನಾನು ಮೂಲ ಸಿನೆಮಾ ನೋಡಿದ್ದರು, ಆ ಪಾತ್ರವನ್ನು ನನ್ನದೇ ರೀತಿಯಲ್ಲಿ ಕಲ್ಪಿಸಿಕೊಂಡೆ. ಅಲ್ಲದೆ, ಅದನ್ನು ನನ್ನದೇ ಸ್ವಂತ ಭಾವನೆಗಳೊಂದಿಗೆ ನಟಿಸಬೇಕಿತ್ತು" ಎನ್ನುವ ಅಮೃತಾ ಈ ಯೋಜನೆ ತಮಗೆ ಸಿಗುವವರೆಗೂ ನಾನು ಚಿತ್ರರಂಗ ಪ್ರವೇಶಿಸುವ ಯಾವುದೇ ಇರಲಿಲ್ಲ ಎನ್ನುತ್ತಾರೆ. 
"ನಾನು ನನ್ನ ಪದವಿ ಪರೀಕ್ಷೆಗಾಗಿ ಓದುತ್ತಿದ್ದೆ. ನಿರ್ದೇಶಕರು ನಾನು ಚಿತ್ರರಂಗದಲ್ಲಿ ಮಹತ್ತರವಾದದ್ದನ್ನು ಸಾಧಿಸುತ್ತೇನೆ ಎಂಬ ನಂಬಿಕೆ ಇಟ್ಟಿದ್ದಾರೆ. ನನಗೆ ಇದ್ದ ಒಂದೇ ಕೌಶಲ್ಯ ಭರತನಾಟ್ಯ ಮತ್ತು ಕ್ಯಾಮರಾ ಮುಂದೆ ನಟಿಸಲು ಅದು ಬಹಳ ಸಹಕರಿಸಿತು" ಎನ್ನುತ್ತಾರೆ ಅಮೃತಾ. 
ಈ ಸಿನೆಮಾದಲ್ಲಿ ಕಡ್ಡಿಪುಡಿ ಚಂದ್ರು ಮತ್ತು ಸಂಜನಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದು, ದರ್ಶನ್ ಕನಕ ಮತ್ತು ವಿಶ್ವೇಶ್ ಶಿವ ಪ್ರಸಾದ್ ಅವರ ಸಿನೆಮ್ಯಾಟೋಗ್ರಫಿ ಇದೆ. 
SCROLL FOR NEXT