ಸಿನಿಮಾ ಸುದ್ದಿ

ಶಿವಣ್ಣನ ತಂಗಿಯಾಗಲಿದ್ದಾರೆಯೇ ಅಮೂಲ್ಯ?

Guruprasad Narayana

ಬೆಂಗಳೂರು: 'ರೋಸ್' ನಂತರ ಸಹನಾ ಮೂರ್ತಿ ಎರಡನೇ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ನಿರ್ದೇಶಿಸಲಿರುವ 'ಮಾಸ್ ಲೀಡರ್' ಸಿನೆಮಾವನ್ನು ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಿಸುತ್ತಿದ್ದು, ಶಿವರಾಜ್ ಕುಮಾರ್ ನಾಯಕ ನಟ. ಚಿತ್ರೀಕರಣ ಏಪ್ರಿಲ್ ನಲ್ಲಿ ಪ್ರಾರಂಭವಾಗಲಿದ್ದು ತಾರಾಗಣದ ಬಗ್ಗೆ ಈಗಾಗಲೇ ಗುಲ್ಲೆಬ್ಬಿದೆ.

ಮೂಲಗಳ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ ಮೊದಲ ಬಾರಿಗೆ ಶಿವರಾಜ್ ಕುಮಾರ್ ತಂಗಿಯ ಪಾತ್ರದಲ್ಲಿ ಅಮೂಲ್ಯ ನಟಿಸಲಿದ್ದಾರೆ. "ನಿರ್ಮಾಪಕರು ನಟಿಯನ್ನು ಕೇಳಿಕೊಂಡಿದ್ದಾರೆ. ಅಮೂಲ್ಯ ಆಸಕ್ತಿ ತೋರಿಸಿದ್ದು ಈ ವಾರದ ಅಂತ್ಯಕ್ಕೆ ಅಧಿಕೃತ ಹೇಳಿಕೆ ಹೊರಬೀಳುವ ಸಾಧ್ಯತೆ ಇದೆ" ಎನ್ನಲಾಗಿದೆ.

ಈ ಹಿಂದೆ ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಅಣ್ಣ ತಂಗಿ ಪಾತ್ರಗಳಲ್ಲಿ ನಟಿಸಿದ್ದ 'ತವರಿಗೆ ಬಾ ತಂಗಿ', 'ಅಣ್ಣ ತಂಗಿ' ಮತ್ತು 'ರಿಷಿ' ಚಿತ್ರಗಳು ಯಶಸ್ವಿ ಎಂದೆನಿಕೊಂಡಿದ್ದವು. ಈಗ ಈ ಹೊಸ ಅಣ್ಣ ತಂಗಿ ಜೋಡಿ ಕನ್ನಡ ಚಿತ್ರೋದ್ಯಮದಲ್ಲಿ  ಮೋಡಿ ಮಾಡಲಿದೆಯೇ?

ಶಿವರಾಜ್ ಕುಮಾರ್ ಅವರ ಶಿವಲಿಂಗ ಬಿಡುಗಡೆಗೆ ಸಿದ್ಧವಾಗಿದ್ದು, 'ಸಂತೆಯಲ್ಲಿ ನಿಂತ ಕಬೀರ', 'ಸನ್  ಆಫ್ ಬಂಗಾರದ ಮನುಷ್ಯ' ಇನ್ನು ಹಲವಾರು ಸಿನೆಮಾಗಳು ಚಿತ್ರೀಕರಣದ ಹಂತದಲ್ಲಿವೆ.

SCROLL FOR NEXT