'ಸಂತೆಯಲ್ಲಿ ನಿಂತ ಕಬೀರ'ದಲ್ಲಿ ನಟ ಶಿವರಾಜ್ ಕುಮಾರ್
ಬೆಂಗಳೂರು: ಐತಿಹಾಸಿಕ ಮಹತ್ವದ ವ್ಯಕ್ತಿಗಳ ಬಗ್ಗೆ ಸಿನೆಮಾಗಳನ್ನು ನೋಡಲು ಆಸಕ್ತಿಯುಳ್ಳವರಿಗೆ ನಮ್ಮ ಸಿನೆಮಾ ಸಂತ ಕವಿ ಕಬೀರ್ ದಾಸ್ ಬಗ್ಗೆ ಎನ್ನುತ್ತಾರೆ ನಿರ್ದೇಶಕ ಇಂದ್ರಬಾಬು.
1440 ರಿಂದ 1478 ರ ನಡುವೆ ನಡೆದ ಹಲವು ಘಟನೆಗಳ ಮೇಲೆ ಬೆಳಕು ಚೆಲ್ಲಲಿರುವ ಈ ಸಿನೆಮಾ ಆ ಗತ ಕಾಲದ ವ್ಯವಹಾರ, ಧರ್ಮ ಮತ್ತು ರಾಜಕೀಯವನ್ನು ಹಿಡಿದಿಡಲಿದೆ. ಈ ತೊಂದರೆಗಳು ಇಂದಿಗೂ ನೆಲೆಸಿದ್ದು, ಸಿನೆಮಾ ಇವೊತ್ತಿಗೂ ಪ್ರಸ್ತುತ ಎಂದು ವಿವರಿಸುತ್ತಾರೆ ನಿರ್ದೇಶಕ.
ರಂಗಭೂಮಿ ಹಿನ್ನಲೆಯಿಂದ ಬಂದಿರುವ ಇಂದ್ರಬಾಬು "ಖ್ಯಾತ ಹಿಂದಿ ಸಾಹಿತಿ ಭೀಷ್ಮನ್ ಸಹನಿ ಅವರ 'ಕಬೀರ್ ಖಾದ ಬಾಜಾರ್ ಮೇ' ಎಂಬ ಪ್ರಸಿದ್ಧ ನಾಟಕದಿಂದ ಸ್ಫುರ್ತಿ ಪಡೆದಿರುವ ಚಿತ್ರ ಇದು" ಎನ್ನುತ್ತಾರೆ.
ಕಬೀರ್ ದಾಸ್ ಆ ಸಮಯದಲ್ಲಿ ವಾಸವಿದ್ದ ಕಾಶಿಯನ್ನು ಚಿತ್ರತಂಡ ಕರ್ನಾಟಕದಲ್ಲಿ ಮರುಸೃಷ್ಟಿಸಿದೆ. "ನಾವು ಕೆ ಆರ್ ಎಸ್ ಅಣೆಕಟ್ಟಿನ ಹಿನ್ನೀರಿನಲ್ಲಿ ಇದನ್ನು ಮರುಸೃಷ್ಟಿಸಿದ್ದೇವೆ. ಚಿತ್ರೀಕರಣದ 70 ಪ್ರತಿಶತ ನಡೆದದ್ದು ಇಲ್ಲಿಯೇ. ಈ ಸೆಟ್ ಸಿದ್ಧಪಡಿಸಲು 40 ಬಡಗಿಗಳು ಮತ್ತು 50 ಕಾರ್ಮಿಕರು ಶ್ರಮಿಸಿದ್ದಾರೆ. ಇದನ್ನು ಸೃಷ್ಟಿಸಲು ನಾಲ್ಕು ತಿಂಗಳು ಹಿಡಿಯಿತು" ಎಂದು ವಿವರಿಸುತ್ತಾರೆ ಇಂದ್ರಬಾಬು.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಶಿವರಾಜ್ ಕುಮಾರ್ ಅವರ ಬೆಂಬಲ ಇತ್ತು ಎನ್ನುವ ನಿರ್ದೇಶಕ "ಕಬೀರ ಚಿತ್ರ ನಿರ್ದೇಶಿರುವ ಯೋಜನೆ ಸೂಚಿಸದ್ದು ಶಿವರಾಜ್ ಕುಮಾರ್ ಅವರೇ. ಅವರಿಗೆ ಕಬೀರ್ ಪದ್ಯಗಳು ಬಹಳ ಚೆನ್ನಾಗಿ ಗೊತ್ತು. ಅವರು ಮಗುವಾಗಿದ್ದಾಗ ಉಪೇಂದ್ರ ಕುಮಾರ್ ಅವರಿಂದ ಕಬೀರನ ಭಜನೆಗಳನ್ನು ಕಲಿತಿದ್ದರಂತೆ" ಎಂದು ಇಂದ್ರಬಾಬು ವಿವರಿಸುತ್ತಾರೆ.
ಈ ಸಿನೆಮಾದಲ್ಲಿ ಸನುಷಾ ಮುಖ ಪಾತ್ರದಲ್ಲಿ ನಟಿಸಿದ್ದಾರೆ, ಅನಂತ ನಾಗ್, ಶರತ್ ಕುಮಾರ್, ಶರತ್ ಲೋಹಿತಾಶ್ವ ಅಕ್ಷತಾ ರಾವ್ ಮತ್ತು 3000 ಕಿರಿಯ ನಟರು ಕೂಡ ನಟಿಸಿದ್ದಾರೆ.
ಇದು ಕಮರ್ಷಿಯಲ್ ಸಿನೆಮಾ ಎಂದು ಹೇಳುವ ನಿರ್ದೇಶಕ, ಕಬೀರನ ಪದ್ಯಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ ಎನ್ನುತ್ತಾರೆ. ಸಾಹಿತಿ-ನಾಟಕಕಾರ ಗೋಪಾಲ ವಾಜಪೇಯಿ ಈ ಸಿನೆಮಾಗೆ ಗೀತ ರಚನೆ ಮಾಡಿದ್ದಾರೆ.