ಮುಂಬೈ ನಲ್ಲಿ ಉಡ್ತಾ ಪಂಜಾಬ್ ಚಿತ್ರದ ತಂಡ 
ಸಿನಿಮಾ ಸುದ್ದಿ

ಬಿಡುಗಡೆಗೂ ಮುನ್ನವೇ ಲೀಕಾಯ್ತು 'ಉಡ್ತಾ ಪಂಜಾಬ್'?: ನಿರ್ಮಾಪಕ ದೂರು

ಬಾಲಿವುಡ್ ನ ಬಹು ವಿವಾದಿತ ಉಡ್ತಾ ಪಂಜಾಬ್ ಸಿನಿಮಾ ಬಿಡುಗಡೆಗೂ ಎರಡೂ ದಿನಕ್ಕೂ ಮುನ್ನವೇ ಆನ್‌ಲೈನ್ ನಲ್ಲಿ ಲೀಕಾಗಿದ್ದು, ಚಿತ್ರದ ನಿರ್ಮಾಪಕ ಸೈಬರ್...

ಮುಂಬೈ: ಬಾಲಿವುಡ್ ನ ಬಹು ವಿವಾದಿತ ಉಡ್ತಾ ಪಂಜಾಬ್ ಸಿನಿಮಾ ಬಿಡುಗಡೆಗೂ ಎರಡೂ ದಿನಕ್ಕೂ ಮುನ್ನವೇ ಆನ್‌ಲೈನ್ ನಲ್ಲಿ ಲೀಕಾಗಿದ್ದು, ಚಿತ್ರದ ನಿರ್ಮಾಪಕ ಸೈಬರ್ ಪೊಲೀಸರಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.
 
ಉಡ್ತಾ ಪಂಜಾಬ್ ನ್ನು ಸೆನ್ಸಾರ್ ಮಂಡಳಿ ಸೆನ್ಸಾರ್ ಮಾಡುತ್ತಿದ್ದು, ಚಿತ್ರವು ಟೊರೆಂಟ್ ಸೈಟ್ ಗಳಲ್ಲಿ ಲಭ್ಯವಿದ್ದು, ಕೆಲವರು ಚಿತ್ರವನ್ನು ಅಕ್ರಮವಾಗಿ ಡೌನ್ ಲೋಡ್ ಮಾಡುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಚಿತ್ರ ಲೀಕ್ ಆದ ವಿಚಾರ ತಿಳಿಯುತ್ತಿದ್ದಂತೆ ಚಿತ್ರದ ತಂಡ ಆಘಾತಗೊಂಡು ಕೂಡಲೇ ಡೌನ್ ಲೋಡ್ ಲಿಂಕ್ ನ್ನು ತೆಗೆದುಹಾಕಿದ್ದಾರೆ.

ಚಿತ್ರ ಲೀಕ್ ಆಗಿ ಆನ್ ಲೈನ್ ಸರಿ ಸುಮಾರು 2 ಗಂಟೆ 20 ನಿಮಿಷಗಳ ಕಾಲ ಓಡಾಡಿದೆ. ಇನ್ನು ಚಿತ್ರ ಲೀಕ್ ಆಗಿರುವ ಕುರಿತಂತೆ ವಿಚಾರಿಸಿದಾಗ ಈ ಬಗ್ಗೆ ಮಾತನಾಡಲು ಚಿತ್ರ ತಂಡ ಹಾಗೂ ನಿರ್ದೇಶಕರು ನಿರಾಕರಿಸಿದ್ದಾರೆ.

ನೈಜ ಕಥೆಯಾಧರಿಸಿ ಸಿನಿಮಾ ನಿರ್ದೇಶಿಸಿದ್ದ ಅನುರಾಗ್ ಕಶ್ಯಪ್ ಅವರಿಗೆ ಸೆನ್ಸಾರ್ ಮಂಡಳಿ ಆಘಾತ ನೀಡಿತ್ತು. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ ಉಡ್ತಾ ಪಂಜಾಬ್ ಚಿತ್ರದ 89 ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ 89 ಕಟ್ ಗಳ ವಿರುದ್ಧ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೂ.13ರಂದು ಅಂತಿಮ ತೀರ್ಪು ಪ್ರಕಟಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!