ನಟಿ ಸರೋಜ್ಮ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಮಾರಿಮುತ್ತು ಖ್ಯಾತಿಯ ಕನ್ನಡದ ನಟಿ ಸರೋಜಮ್ಮ ವಿಧಿವಶ

ಮಾರಿಮುತ್ತು ಖ್ಯಾತಿಯ ಕನ್ನಡದ ಖ್ಯಾತ ಹಿರಿಯ ನಟಿ ಸರೋಜಮ್ಮ ಶನಿವಾರ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ...

ಬೆಂಗಳೂರು: ಮಾರಿಮುತ್ತು ಖ್ಯಾತಿಯ ಕನ್ನಡದ ಖ್ಯಾತ ಹಿರಿಯ ನಟಿ ಸರೋಜಮ್ಮ ಶನಿವಾರ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಹಲವು ದಿನಗಳಿಂದ ಎದೆನೋವಿನಿಂದ ಬಳಲುತ್ತಿದ್ದ ನಟಿ ಸರೋಜಮ್ಮ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ನಿನ್ನೆ ತಡರಾತ್ರಿ 12 ಗಂಟೆ ಸುಮಾರಿನಲ್ಲಿ  ಮತ್ತೆ ತೀವ್ರ ಎದೆನೋವು ಕಾಣಿಸಿಕೊಂಡು ಬಳಿಕ ಹೃದಾಯಾಘಾತವಾದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರೋಜಮ್ಮ ಅವರು ನಿನ್ನೆ ರಾತ್ರಿ  ಸುಮಾರು 1 ಗಂಟೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸರೋಜಮ್ಮ ಅವರ ಪಾರ್ಥೀವ ಶರೀರವನ್ನು ಅವರ ಸ್ವಗೃಹದಲ್ಲಿ ಇಂದು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಚಿತ್ರರಂಗದ ಹಲವರು ಅಂತಿಮ ದರ್ಶನ ಪಡೆಯಲಿದ್ದಾರೆ.

ಖ್ಯಾತ ನಟ ನಿರ್ದೇಶಕ ಉಪೇಂದ್ರ ಅಭಿನಯಿಸಿ ನಿರ್ದೇಶಸಿದ್ದ "ಉಪೇಂದ್ರ" ಚಿತ್ರದಲ್ಲಿ ಮಾರಿಮುತ್ತು ಪಾತ್ರದಲ್ಲಿ ಅಭಿನಯಿಸಿದ್ದ ಸರೋಜಮ್ಮ ಅವರು ಅದೇ ಹೆಸರನಲ್ಲಿ ಖ್ಯಾತಿ ಗಳಿಸಿದ್ದರು.  ಬಳಿಕ ರಮೇಶ್ ಅರವಿಂದ್ ಅಭಿನಯದ ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು ಚಿತ್ರದಲ್ಲಿ ಅಭಿನಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

ಅಕ್ಟೋಬರ್ 7 ರ ದಾಳಿಯ ಮೊದಲು ಹಮಾಸ್‌ ಎಚ್ಚರಿಕೆ ನೀಡಿತ್ತು: ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವರ ಸ್ಫೋಟಕ ಮಾಹಿತಿ

1st ODI: ಕೊಹ್ಲಿ, ಗಿಲ್ ಸಿಡಿಲಬ್ಬರದ ಶತಕ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ!

Cricket: ರಿಕ್ಕಿ ಪಾಂಟಿಂಗ್ ಹಳೆಯ ದಾಖಲೆ ಧೂಳಿಪಟ ಮಾಡಿದ Virat Kohli, ಧೋನಿ, ಸಚಿನ್ ದಾಖಲೆಗೂ ಕುತ್ತು!

ಶತಕಗಳ ಶತಕ: 'ಮಾಸ್ಟರ್ ಬ್ಲಾಸ್ಟರ್' ಸಾರ್ವಕಾಲಿಕ ದಾಖಲೆ ಮುರಿಯಲು 'ಚೇಸ್-ಮಾಸ್ಟರ್' ಮತ್ತಷ್ಟು ಸನಿಹ!