ದರ್ಶನ್ ಮತ್ತು ವಿಜಯಲಕ್ಷ್ಮಿ 
ಸಿನಿಮಾ ಸುದ್ದಿ

ತಾಕತ್ತಿದ್ದರೆ ನನ್ನ ಬಾಯ್ ಫ್ರೆಂಡ್ ಯಾರು ಎಂದು ಸಾಬೀತುಪಡಿಸಲಿ: ದರ್ಶನ್ ಗೆ ಪತ್ನಿ ಸವಾಲು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪತ್ನಿ ಚಾಲೆಂಜ್ ಮಾಡಿದ್ದಾರೆ. ತಾಕತ್ತಿದ್ದರೇ ನನ್ನ ಬಾಯ್ ಫ್ರೆಂಡ್ ಯಾರು ಎಂಬುದನ್ನು ಸಾಬೀತು ಪಡಿಸಲಿ ಎಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸವಾಲು ಹಾಕಿದ್ದಾರೆ. ..

ಬೆಂಗಳೂರು:  ತಾಕತ್ತಿದ್ದರೇ ನನ್ನ ಬಾಯ್ ಫ್ರೆಂಡ್ ಯಾರು ಎಂಬುದನ್ನು ಸಾಬೀತು ಪಡಿಸಲಿ ಎಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸವಾಲು ಹಾಕಿದ್ದಾರೆ.  

ಪ್ರಕರಣ ಸಂಬಂಧ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯಲಕ್ಷ್ಮಿ, ನನ್ನ ವಿರುದ್ಧ ದರ್ಶನ್ ಮಾಡಿರುವ ಆರೋಪಗಳೆಲ್ಲಾ ಶುದ್ದ ಸುಳ್ಳು ಎಂದು ಹೇಳಿದ್ದಾರೆ. ಆರೋಪ ಮಾಡಿರುವಂತಹ ವ್ಯಕ್ತಿತ್ವ ನನ್ನದಲ್ಲ. ನಾನು ಏನು ಎಂದು ಎಲ್ಲರಿಗೂ ಗೊತ್ತಿದೆ. ದರ್ಶನ್ ಮನೆಯ ಕೆಲಸದವರನ್ನೇ ಕೇಳಿ. ಕಳೆದ ಒಂದೂವರೆ ವರ್ಷದಿಂದ ನಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ನಾನು ಮನೆಯಿಂದ ಬರುವಾಗ ಆಡಿ ಕಾರು ಜೊತೆಗೆ ತಂದಿದ್ದೆ ಎಂದು ಹೇಳಿರುವ ವಿಜಯಲಕ್ಷ್ಮಿ ಬಾಯ್ ಫ್ರೆಂಡ್ ವಿಚಾರ ಏಕೆ ಬಂತೊ ಗೊತ್ತಿಲ್ಲ ಎಂದು ನೊಂದು ನುಡಿದಿದ್ದಾರೆ.

ನನ್ನ ಮತ್ತು ನನ್ನ ಮಗನ ಸುರಕ್ಷತೆಯೇ ಮುಖ್ಯ. ಹೀಗಾಗಿ ನಿನ್ನೆ ಸಂಜೆ ಬಂದು ಅಪಾರ್ಟ್ ಮೆಂಟ್ ಬಳಿ ಗಲಾಟೆ ಮಾಡಿದ್ದಕ್ಕಾಗಿ ನಾನು ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ ದರ್ಶನ್ ವಿರುದ್ಧ ಬೇರೆ ಯಾವ ಆರೋಪಗಳನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಮತ್ತು ಪತಿಯ ನಡುವೆ ಹಲವು ಭಿನ್ನಾಭಿಪ್ರಾಯಗಳಿವೆ. ನನ್ನ ಮಗನನ್ನು ರಕ್ಷಿಸುವ ಅಗತ್ಯವಿದೆ. ಅವನ ಭವಿಷ್ಯ ರೂಪಿಸುವ ಜವಾಬ್ದಾರಿ ನನ್ನ ಮೇಲಿದೆ. ಅವನನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕೆಂದು ನನ್ನ ಉದ್ದೇಶ, ದರ್ಶನ್ ಜೊತೆ ನಿರಂತರ ಜಗಳದಿಂದ ತುಂಬಾ ನೊಂದಿದ್ದೇನೆ. ಹೀಗಾಗಿ ಅವರನ್ನು ಕರೆಸಿ ಬುದ್ದಿ ಹೇಳಿ ಎಂದು ಮಾತ್ರ ಠಾಣೆಯಲ್ಲಿ ಹೇಳಿರುವುದಾಗಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT