ಹೇಮಾಮಾಲಿನಿ 
ಸಿನಿಮಾ ಸುದ್ದಿ

ನಟಿಯಾಗಿ ಸಿಕ್ಕಿದ್ದಕ್ಕಿಂತ ಸಂಸದೆಯಾಗಿ ಸಿಕ್ಕಿರುವ ಗೌರವವೇ ಹೆಚ್ಚು: ಹೇಮಾಮಾಲಿನಿ

ಬಾಲಿವುಡ್ ನಲ್ಲಿ ನಟಿಯಾಗಿ ಸಿಕ್ಕಿದ್ದಕ್ಕಿಂತ ಸಂಸದೆಯಾಗಿಯೇ ಹೆಚ್ಚು ಗೌರವ ಸಿಕ್ಕಿದೆ ಎಂದು ಬಾಲಿವುಡ್ ಡ್ರೀಂಗರ್ಲ್ ಹೇಮಾಮಾಲಿನಿಯವರು ಶುಕ್ರವಾರ ಹೇಳಿದ್ದಾರೆ...

ನವದೆಹಲಿ: ಬಾಲಿವುಡ್ ನಲ್ಲಿ ನಟಿಯಾಗಿ ಸಿಕ್ಕಿದ್ದಕ್ಕಿಂತ ಸಂಸದೆಯಾಗಿಯೇ ಹೆಚ್ಚು ಗೌರವ ಸಿಕ್ಕಿದೆ ಎಂದು ಬಾಲಿವುಡ್ ಡ್ರೀಂಗರ್ಲ್ ಹೇಮಾಮಾಲಿನಿಯವರು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಂಸತ್ ನಲ್ಲಿ ಸದಸ್ಯರಾದರೆ ಹೆಚ್ಚಿನ ಗೌರವ ಸಿಗುತ್ತದೆ. ನಟಿಯಾಗಿ ನಾನು ನನ್ನ ಸ್ವಂತ ಘನತೆಯನ್ನು ಹೊಂದಿದ್ದೇನೆ. ಆದರೆ, ರಾಜಕಾರಣಿಯಾಗಿ ನನ್ನ ಗೌರವ ಹೆಚ್ಚಿದೆಯೇ ಹೊರತು ಕಡಿಮೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹೇಮಾಮಾಲಿನಿಯವರು ತಮ್ಮ ನೃತ್ಯ ಅಕಾಡೆಮಿ ನಾಟ್ಯ ವಿಹಾರ ಕಲಾಕೇಂದ್ರ ಚಾರಿಟಿ ಟ್ರಸ್ಟ್ ಗಾಗಿ ಮುಂಬೈಯ ಅಂಧೇರಿಯಲ್ಲಿ ರು. 70,000 ಅಕ್ರಮ ಭೂಮಿಯನ್ನು ಪಡೆದಿದ್ದಾರೆಂಬ ಆರೋಪಗಳು ಕೇಳಿಬಂದಿತ್ತು.  

ಈ ಆರೋಪದ ಕುರಿತಂತೆ ಸ್ಪಷ್ಟನೆ ನೀಡಿರುವ ಅವನರು, ಮಹಾರಾಷ್ಟ್ರ ಸರ್ಕಾರ ನನಗೆ ಭೂಮಿಯನ್ನು ನೀಡಿದೆ. ಆದರೆ, ಇದು ದೊಡ್ಡ ವಿವಾದವೇಕೆ ಆಗುತ್ತಿದೆ? ನಾನು ಹೇಮಾಮಾಲಿನಿ ಎಂಬ ಕಾರಣಕ್ಕೆ ಅಲ್ಲ. ಇದು ನಾನು ಸಂಸದೆಯಾಗಿರುವುದಕ್ಕೆ. ಸಂಸದೆಯಾಗಿರುವುದಕ್ಕೆ ಸಮಸ್ಯೆಯುಂಟಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್

ಸಚಿವ ಸಂಪುಟದಲ್ಲಿ ಬೆಂಗಳೂರು ಮೇಲುಗೈ; ಯಾದಗಿರಿ ಸೇರಿ 8 ಜಿಲ್ಲೆಗಳಿಗೆ ಸಿಗಲಿಲ್ಲ ಪ್ರಾತಿನಿಧ್ಯ..!

ಡಿಕೆಶಿ ಸಂಪುಟದಲ್ಲಿ ಹೊಸ ತಲೆಮಾರಿಗೆ ಅವಕಾಶ; 7 ಶಾಸಕರಿಗೆ ಸಚಿವ ಸ್ಥಾನ, ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ ನಾಯಕರು ಯಾರು?