ಬೆಂಗಳೂರು: ಶಿವು ಜಮಖಂಡಿ ನಿರ್ದೇಶನದ ನನ್ನನಿನ್ನ ಪ್ರೇಮಕಥೆ ಸಿನಿಮಾದಲ್ಲಿ ಕನ್ನಡ ಐದು ಪ್ರಸಿದ್ದ ಕಲಾವಿದರು ಹಾಡುಗಳಿಗೆ ದನಿ ನೀಡಿದ್ದಾರೆ.
ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಿಧಿ ಸುಬ್ಬಯ್ಯ ಮತ್ತು ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ. ಪುನೀತ್ ರಾಜ್ ಕುಮಾರ್, ಉಪೇಂದ್ರ ಮತ್ತು ಹಾಸ್ಯ ನಟ ಚಿಕ್ಕಣ್ಣ ಹಾಡುಗಳನ್ನು ಹಾಡಿದ್ದಾರೆ.
ಚಿತ್ರದಲ್ಲಿ 7 ಹಾಡುಗಳಿದ್ದು, ಎಲ್ಲಾ ಹಾಡುಗಳಿಗೂ ಶಿವು ಜಮಖಂಡಿ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಮೊದಲಿಗೆ ಎಲ್ಲಾ ಹಾಡುಗಳ ಸಾಹಿತ್ಯ ಸಂಗೀತ ರಚನೆ ಮಾಡಿ ಅವರಿಗೆ ಕಳುಹಿಸಿದೆ, ನಂತರ ನಟರು ನೀಡಿದ ಡೇಟ್ಸ್ ಗಳನ್ನು ಹೊಂದಾಣಿಕೆ ಮಾಡಿಕೊಂಡು ಹಾಡುಗಳನ್ನು ಹಾಡಿಸಿದ್ದಾಗಿ ಹೇಳಿದ್ದಾರೆ.
ಇಡೀ ಚಿತ್ರರಂಗದ ಕೊಡುಗೆ ಬಗ್ಗೆ ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಹಾಗೂ ತಂತ್ರಜ್ಞರುಗಳನ್ನು ಕುರಿತು ಪುನೀತ್ ರಾಜ್ ಕುಮಾರ್ ಹಾಡು ಹಾಡಿದ್ದಾರೆ. ಹಾಸ್ಯನಟ ಚಿಕ್ಕಣ್ಣ ಶೋಕಗೀತೆಯೊಂದನ್ನು ಹಾಡಿದ್ದಾರೆ.
ಉತ್ತರ ಕರ್ನಾಟಕದ ಶೈಲಿಯಲ್ಲಿ ನಟ ಉಪೇಂದ್ರ ಹಾಡೊಂದನ್ನು ಹಾಡಿದ್ದಾರೆ. ವಿಜಯ್ ರಾಘವೇಂದ್ರ ಮತ್ತು ನಿಧಿ ಸುಬ್ಬಯ್ಯ ಪ್ರೇಮ ಗೀತೆಗಳನ್ನು ಹಾಡಿದ್ದಾರೆ.
ಹಿಂದಿಯ ಹಮ್ ಆಪ್ ಕೆ ಹೈ ಕೌನ್ ಸಿನಿಮಾದಂತೆ ನನ್ನ ನಿನ್ನ ಪ್ರೇಮಕಥೆಯ ಸಿನಿಮಾ ಜನಮಾನಸದಲ್ಲಿ ಉಳಿಯುವುದಾಗಿ ನಿರ್ದೇಶಕ ಶಿವು ತಿಳಿಸಿದ್ದಾರೆ.