ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 
ಸಿನಿಮಾ ಸುದ್ದಿ

17 ವರ್ಷದ ದಾಂಪತ್ಯಕ್ಕೆಎಳ್ಳುನೀರು: ಕೋರ್ಟ್ ಮೆಟ್ಟಿಲೇರಿದ ಮಲೈಕಾ-ಅರ್ಬಾಜ್ ಖಾನ್

ಬಾಲಿವುಡ್ ನ ಆದರ್ಶ ದಂಪತಿ ಎಂದೇ ಖ್ಯಾತರಾಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 17 ವರ್ಷಗಳ ದಾಂಪತ್ಯಕ್ಕೆ ಎಳ್ಳುನೀರು ಬಿಡಲು ..

ಮುಂಬಯಿ: ಬಾಲಿವುಡ್ ನ ಆದರ್ಶ ದಂಪತಿ ಎಂದೇ ಖ್ಯಾತರಾಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 17 ವರ್ಷಗಳ ದಾಂಪತ್ಯಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿದ್ದಾರೆ.

ಕೆಲ ತಿಂಗಳ ಹಿಂದೆ ಅರ್ಬಾಜ್ ಖಾನ್ ಮನೆ ಬಿಟ್ಟು ಹೊರ ಬಂದಿದ್ದ ಮಲೈಕಾ ಅರೋರಾ ತಾವಿಬ್ಬರು ಪ್ರತ್ಯೇಕವಾಗುತ್ತಿರುವುದಾಗಿ ತಿಳಿಸಿದ್ದರು. ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದರು. ನ್ಯಾಯಾಲಯದ ಆದೇಶದಂತೆ ಆರು ತಿಂಗಳ ಗಡುವಿನಲ್ಲಿ ವಿಚ್ಛೇದನದ ಬಗ್ಗೆ ಮರು ಚಿಂತಿಸುವಂತೆ ನ್ಯಾಯಾಲಯ ತಿಳಿಸಿತ್ತು. ಆದರಂತೆ ಆರು ತಿಂಗಳ ನಂತರ ಇಂದು ಮತ್ತೆ ಕೌಟುಂಬಿಕ ನ್ಯಾಯಾಲಯಕ್ಕೆ ಇಬ್ಬರು ಕೌನ್ಸಿಲಿಂಗ್ ಗೆ ಹಾಜರಾಗಿದ್ದಾರೆ.

ಅರ್ಜುನ್ ಕಪೂರ್ ಜೊತೆಗಿನ ಸ್ನೇಹ ಇಬ್ಬರ ನಡುವಿನ ಬಿರುಕಿಗೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸದಾ ತನ್ನ ಸಹೋದರ ಸಲ್ಮಾನ್ ಖಾನ್ ನೆರಳಿನಲ್ಲೇ ಅರ್ಬಾಜ್ ಖಾನ್ ಜೀವನ ಮಾಡುತ್ತಿರುವುದು ಆಕೆಗೆ ಇಷ್ಟವಿರಲಿಲ್ಲ, ಹೀಗಾಗಿ ಸ್ವತಂತ್ರ್ಯವಾಗಿ ಬದುಕಲು ಬಯಸುತ್ತಿದ್ದಳು ಎಂದು ಹೇಳಲಾಗುತ್ತಿದೆ. ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ದಂಪತಿಗೆ 14 ವರ್ಷದ ಆರ್ಹಾನ್ ಎಂಬ ಮಗನಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!