ನಟಿ ಕಾಜೋಲ್ ಹಾಗೂ ಅಜಯ್ ದೇವ್ಗನ್ 
ಸಿನಿಮಾ ಸುದ್ದಿ

ಪಾಕ್ ಕಲಾವಿದರೊಂದಿಗೆ ನಟಿಸೋಲ್ಲ: ಪತಿಯ ನಿರ್ಧಾರಕ್ಕೆ ಕಾಜೋಲ್ ಹೆಮ್ಮೆ

ಪಾಕಿಸ್ತಾನ ಕಲಾವಿದರೊಂದಿಗೆ ನಟಿಸುವುದಿಲ್ಲ, ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ನಟ ಅಜಯ್ ದೇವ್ಗನ್ ಅವರ ನಿರ್ಧಾರಕ್ಕೆ ಪತ್ನಿ ಕಾಜೋಲ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಪತಿಯ ಈ ನಿರ್ಧಾರಕ್ಕೆ...

ನವದೆಹಲಿ: ಪಾಕಿಸ್ತಾನ ಕಲಾವಿದರೊಂದಿಗೆ ನಟಿಸುವುದಿಲ್ಲ, ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ನಟ ಅಜಯ್ ದೇವ್ಗನ್ ಅವರ ನಿರ್ಧಾರಕ್ಕೆ ಪತ್ನಿ ಕಾಜೋಲ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಪತಿಯ ಈ ನಿರ್ಧಾರಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಅಜಯ್ ದೇವ್ಗನ್ ಅವರ ನಿರ್ಧಾರ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ರಾಜಕೀಯವಲ್ಲದ ಹಾಗೂ ಉತ್ತಮ ನಿರ್ಧಾರವೊಂದನ್ನು ನನ್ನ ಪತಿ ತೆಗೆದುಕೊಂಡಿದ್ದು, ಪತಿಯ ನಿರ್ಧಾರಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಖಾಸಗಿ ಮಾಧ್ಯಮವೊಂದರ ಸಂದರ್ಶದಲ್ಲಿ ಮಾತನಾಡಿದ್ದ ಅಜಯ್ ದೇವ್ಗನ್ ಅವರು, ಕಲಾವಿದರನ್ನು ಭಯೋತ್ಪಾದಕರೊಂದಿಗೆ ಹೋಲಿಕೆ ಮಾಡಬಾರದು ಈ ಮಾತನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಭಾರತ ಮತ್ತು ಪಾಕಿಸ್ತಾನ ವಿಚಾರ ಬಂದಾಗ ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಮಾತನಾಡಬಾರದು.

ಎರಡು ದೇಶಗಳ ಮಧ್ಯೆ ಇದೀಗ ಹೋರಾಟವಾಗುತ್ತಿದೆ. ಈ ಸಮಯದಲ್ಲಿ ಸಂಸ್ಕೃತಿ ಬಗ್ಗೆ ಮಾತನಾಡುತ್ತಿದ್ದೀರಾ? ದೇಶದ ವಿಚಾರ ಬಂದಾಗ ನಮ್ಮನ್ನು ಪ್ರತ್ಯೇಕಿಸಿಕೊಳ್ಳಬಾರದು. ಪಾಕಿಸ್ತಾನ ಕಲಾವಿದರೊಂದಿಗೆ ಯಾವುದೇ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ನಟಿಸುವುದಿಲ್ಲ. ಪಾಕಿಸ್ತಾನದಲ್ಲಿ ನನ್ನ ಸಿನಿಮಾ ಬಿಡುಗಡೆಯಾಗದಿದ್ದರೆ ನನಗೆ ಚಿಂತೆಯಿಲ್ಲ. ನಾವು ಮೊದಲು ಭಾರತೀಯರು. ಪಾಕಿಸ್ತಾನದಲ್ಲಿರುವ ನಟರು ಅವರ ದೇಶದ ಪರವಾಗಿ ನಿಂತಿದ್ದಾರೆ. ಪಾಕ್ ಕಲಾವಿದರು ನಮ್ಮ ದೇಶದಲ್ಲಿ ದುಡ್ಡು ಮಾಡುತ್ತಿದ್ದಾರೆ. ಆದರೂ, ಅವರ ದೇಶಕ್ಕೇ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!