ನಟ ಮನೋರಂಜನ್ 
ಸಿನಿಮಾ ಸುದ್ದಿ

ಡಬ್ಬಿಂಗ್ ನಿರತನಾಗಿರುವ 'ಸಾಹೇಬ' ಮನೋರಂಜನ್'

ಮನೋರಂಜನ್ ರವಿಚಂದ್ರನ್ ತಮ್ಮ ಚೊಚ್ಚಲ ಚಲನಚಿತ್ರ 'ಸಾಹೇಬ'ನಿಗೆ ಡಬ್ಬಿಂಗ್ ಬಹುತೇಕ ಮುಗಿಸಿರುವುದಕ್ಕೆ ಅತೀವ ಸಂತಸದಿಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರತನಾಗಿರುವ ನಟ ತಮ್ಮ

ಬೆಂಗಳೂರು: ಮನೋರಂಜನ್ ರವಿಚಂದ್ರನ್ ತಮ್ಮ ಚೊಚ್ಚಲ ಚಲನಚಿತ್ರ 'ಸಾಹೇಬ'ನಿಗೆ ಡಬ್ಬಿಂಗ್ ಬಹುತೇಕ ಮುಗಿಸಿರುವುದಕ್ಕೆ ಅತೀವ ಸಂತಸದಿಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರತನಾಗಿರುವ ನಟ ತಮ್ಮ ಡಬ್ಬಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. 
"ಮೊದಲ ಎರಡು ದಿನಗಳು ಸ್ವಲ್ಪ ಕಷ್ಟ ಇತ್ತು" ಎನ್ನುವ ಅವರು "ಆದರೆ ಸ್ಟುಡಿಯೋಗೆ ಹೋಗುವ ಮುಂಚೆ ಸಿದ್ಧವಾಗಿ ಹೋಗುತ್ತಿದ್ದೆ. ಪಾತ್ರದ ನಟನೆಯ ಜೊತೆಗೆ ನಮ್ಮ ಕಂಠವನ್ನು ಸಿಂಕ್ ಮಾಡುವುದು ಸವಾಲಿನ ಕೆಲಸ ಎಂದು ತಿಳಿಯಿತು. ಆದರೆ ಅದು ಸಿನೆಮಾದ ಪ್ರಮುಖ ಅಂಗ. ಈಗ ನಾನು ಅದಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದೇನೆ" ಎನ್ನುತ್ತಾರೆ ಮನೋರಂಜನ್. ಇಂದು ಅವರ ಭಾಗದ ಡಬ್ಬಿಂಗ್ ನ ಕೊನೆಯ ದಿನ. 
ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಳಿಯುಳಿದಿದ್ದು ಈ ತಿಂಗಳ ಕೊನೆಗೆ ಚಿತ್ರತಂಡ ಇದನ್ನು ಸಂಪೂರ್ಣಗೊಳಿಸಲಿದೆ. "ಸಾಹೇಬ ಸಂಪೂರ್ಣಗೊಂಡ ನಂತರ ರಾಕ್ಲೈನ್ ವೆಂಕಟೇಶ್ ನಿರ್ಮಾಣದ, ನಂದ ಕಿಶೋರ್ ನಿರ್ದೇಶನದ ಎರಡನೇ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಅದು ಬಹುಷಃ ನವೆಂಬರ್ ನಲ್ಲಿ ಚಿತ್ರೀಕರಣ ಪ್ರರಾಂಭಿಸಲಿದೆ" ಎನ್ನುತ್ತಾರೆ ಮನೋರಂಜನ್. 
ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿರುವ 'ಸಾಹೇಬ' ನಿರ್ದೇಶಕ 'ಕಂಠಿ' ಖ್ಯಾತಿಯ ಭರತ್. ಶಾನ್ವಿ ಶ್ರೀವಾಸ್ತವ ನಾಯಕನಟಿಯಾಗಿದ್ದು, ವಿ ಹರಿಕೃಷ್ಣ ಸಂಗೀತ ನಿರ್ದೇಶಕ ಹಾಗು ಜಿ ಎಸ್ ವಿ ಸೀತಾರಾಮ್ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT