ಸಿಕ್ಸ್ ಪ್ಯಾಕ್ ನಲ್ಲಿ ನಿರ್ದೇಶಕ ಸೂರಿ
ನಿರ್ದೇಶಕ ಎಂಬ ಬಿರುದಿಗಿಂತ ಜಾಸ್ತಿ ಸೂರಿಯವರಲ್ಲಿ ಇನ್ನೂ ಏನೇನೋ ಮಾಡಬೇಕೆಂಬ ತುಡಿತವಿದೆ. ಸೂರಿಯವರು ತಮ್ಮ ಇತ್ತೀಚಿನ ಭಾವಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡಿ ಫೋಸ್ ಕೊಟ್ಟಿರುವುದು ಭಾರೀ ಸುದ್ದಿ ಮಾಡುತ್ತಿದೆ.
ತಮ್ಮ ದಿನ ನಿತ್ಯದ ಶ್ರದ್ಧೆಯ ವ್ಯಾಯಾಮಗಳಿಂದ 6 ತಿಂಗಳಿನಲ್ಲಿ ಸೂರಿಯವರು ಸಿಕ್ಸ್ ಪ್ಯಾಕ್ ಶರೀರವನ್ನು ಗಿಟ್ಟಿಸಿಕೊಂಡಿದ್ದಾರೆ.
'' ಇದು ಏನೋ ಸಿಕ್ಸ್ ಪ್ಯಾಕ್ ಮಾಡಿ ಬಾಡಿಯನ್ನು ಚೆಂದವಾಗಿ ಇಟ್ಟುಕೊಳ್ಳಬೇಕೆಂದು ಮಾಡಿದ್ದಲ್ಲ. ಸಿಕ್ಸ್ ಪ್ಯಾಕ್ ನಿಂದಾಗಿ ನನಗೆ ಕುಡಿಯುವ ಅಭ್ಯಾಸದಿಂದ ದೂರವಿರಲು ಸಾಧ್ಯವಾಗಿದೆ. ಈ ಬದಲಾವಣೆ ನನ್ನ ಜೀವನದಲ್ಲಿ ಶಿಸ್ತು ತಂದಿದ್ದು ಬೇರೆ ವಿಷಯಗಳತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗಿದೆ. ನಾನು ಹಿಂದೆ ಈ ರೀತಿ ಇರಲಿಲ್ಲ'' ಎನ್ನುತ್ತಾರೆ ಸೂರಿ.
ತಮ್ಮ ಸಿಕ್ಸ್ ಪ್ಯಾಕ್ ಆಬ್ ನ ಫೋಟೋ ಶೂಟ್ ನ್ನು ಮಹೇಂದ್ರ ಸಿಂಹ ಎಂಬುವವರ ಕೈಯಲ್ಲಿ ಮಾಡಿಸಿಕೊಂಡಿದ್ದಾರೆ. ನಾವು ಒಬ್ಬ ನಟ ನಿರ್ದೇಶಕನಿಗೆ ಸಂಪೂರ್ಣ ಬದ್ಧತೆ ತೋರಿಸಿ ನಟಿಸಬೇಕೆಂಬ ಬಯಸುವಂತೆ ನಾನು ನನ್ನ ತರಬೇತುದಾರನಿಗೆ ಸಂಪೂರ್ಣ ಶರಣಾಗಿದ್ದೆ. ನಮ್ಮ ಗುರಿಯನ್ನು ಸಾಧಿಸಬೇಕೆಂದರೆ ಒಳ್ಳೆಯ ಗುರು ಸಿಗಬೇಕು. ನನ್ನ ವಿಷಯದಲ್ಲಿ ನನ್ನ ಫಿಟ್ ನೆಸ್ ಗುರು ಶ್ರೀನಿವಾಸ್ ಅವರು ಹೇಳಿದಂತೆಯೇ ಕೇಳಿದ್ದೇನೆ. ಇಂದು ನಾನು ಮಾಡಿದ ಸಾಧನೆಯನ್ನು ಅವರು ನೋಡಿ ಖುಷಿಪಡುತ್ತಾರೆ ಎಂದರು ಸೂರಿ.
ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಕೆಲವರು ಇದೀಗ ಸೂರಿಯವರಿಗೆ ಕಥೆ ಬರೆಯಲು ಮುಂದೆ ಬಂದಿದ್ದಾರಂತೆ. ತಾವು ನಟಿಸಲು ಅವರೆಲ್ಲಾ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ನನಗೆ ಕ್ಯಾಮರಾ ಎದುರಿಸಲು ಇಷ್ಟವಿಲ್ಲ ಎಂದು ಸೂರಿ ಹೇಳುತ್ತಾರೆ.
ಇದೇ ಸಂದರ್ಭದಲ್ಲಿ ತಮ್ಮ ಮೇಲೆ ನಂಬಿಕೆ ಇಟ್ಟಿಲ್ಲದವರಿಗೆ ಧನ್ಯವಾದ ಹೇಳುತ್ತಾರೆ ಸೂರಿ. ನನ್ನ ಸಾಮರ್ಥ್ಯವನ್ನು ಒಪ್ಪದವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನನ್ನು ತಿರಸ್ಕರಿಸಿರದಿದ್ದರೆ ನಾನಿಂದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ನಿರ್ದೇಶಕ ಸೂರಿ ಹೇಳುತ್ತಾರೆ.