ಬೆಂಗಳೂರು: ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ತಿರುವು ನೀಡಿ, ನಟನೆಯಲ್ಲೂ ತಮ್ಮದೇ ಛಾಪು ಮೂಡಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಸ್ಕ್ರಿಪ್ಟ್ ಬರೆಯುವುದು ಸುಲಭ ಕೆಲಸವಲ್ಲ. ನಿರ್ದೇಶಕ ಉದಯ್ ಪ್ರಕಾಶ್ ಒಂದು ವರ್ಷ ಸಮಯ ತೆಗೆದುಕೊಂಡ ಉಪೇಂದ್ರ ಅವರಿಗೆ ಬರೆದ ಸ್ಕ್ರಿಪ್ಟ್, ನಟನ ಅನುಮೋದನೆ ಸಿಗುವ ಹೊತ್ತಿಗೆ 8 ಬಾರಿ ತಿದ್ದಲಾಯಿತಂತೆ!
ಇದಕ್ಕೂ ಹೆಚ್ಚಿನ ಆಸಕ್ತಿದಾಯಕ ಸಂಗತಿಯೆಂದರೆ ಸಿನೆಮಾದ ಹೆಸರು 'ಮೋದಿ' ಮತ್ತು ಉಪೇಂದ್ರ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 18 ರಂದು ಘೋಷಣೆಯಾಗುತ್ತಿರುವ ಅವರ ನಟನೆಯ ಮೂರ್ನಾಲ್ಕು ಸಿನೆಮಾಗಳಲ್ಲಿ ಇದು ಕೂಡ ಒಂದು.
ಕೆ ಸಿ ಎನ್ ಕುಮಾರ್ ನಿರ್ಮಾಣದ ಈ ಸಿನೆಮಾದ ಶೀರ್ಷಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮೋದನೆ ನೀಡಿದ್ದು, ಉದಯ್ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.
'ಕಳ್ಳ ಮಳ್ಳ ಸುಳ್ಳ' ಮತ್ತು 'ಆಟೋ ರಾಜ' ಸಿನೆಮಾಗಳನ್ನು ನಿರ್ದೇಶಿಸರುವ ಉದಯ್ "ಇದು ಸಾಮಾನ್ಯ ಶೀರ್ಷಿಕೆ ಅಲ್ಲ ಹಾಗೆ ಕಥೆಯು ಕೂಡ. ಆದುದರಿಂದ 'ಮೋದಿ' ಶೀರ್ಷಿಕೆ ನಾವು ಬಳಸಬಹುದು ಎಂದು ತಿಳಿದು ಸಂತಸವಾಗಿದೆ" ಎನ್ನುತ್ತಾರೆ.
ಸದ್ಯದ ಪ್ರಧಾನಿಯವರ ಹೆಸರೊತ್ತ ಈ ಶೀರ್ಷಿಕೆಕೆಯ ಅಡಿ ಬರಹ 'ನೋ ಪಾಲಿಟಿಕ್ಸ್ ಪ್ಲೀಸ್' (ದಯವಿಟ್ಟು ರಾಜಕೀಯ ಬೇಡ) ಎಂದಿದೆಯಂತೆ. ಆದರೆ ಸಿನೆಮಾಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಿನೆಮಾ ಕ್ರಾಂತಿಯ ಬಗ್ಗೆ ಎನ್ನುವ ಉದಯ್ "ಮೋದಿಯವರಿಗೂ ಮತ್ತು ನನ್ನ ಸಿನೆಮಾಗೂ ಸಂಬಂಧವಿಲ್ಲ ಆದರೆ ಒಂದೇ ಕೊಂಡಿಯೆಂದರೆ ನರೇಂದ್ರ ಮೋದಿಯವರ ಉತ್ಸಾಹ ಮತ್ತು ಅವರ ಜವಾಬ್ದಾರಿಯ ಗುಣವನ್ನು, ಉಪೇಂದ್ರ ಪಾತ್ರವಹಿಸುವ ಸಾಮಾನ್ಯ ಮನುಷ್ಯನ ಮೂಲಕ ಪ್ರತಿನಿಧಿಸುತ್ತೇವೆ" ಎನ್ನುವ ನಿರ್ದೇಶಕ "ಪ್ರತಿ ರಾಜಕಾರಣಿಯೂ ಮೊದಲು ಸಾಮಾನ್ಯ ಮನುಷ್ಯ. ಪ್ರಧಾನಿ ಮೋದಿ ಅವರು ತಮ್ಮ ಗುರಿಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಕಥೆಯಲ್ಲಿ ನರೇಂದ್ರ ಮೋದಿಯವರ ಬಗ್ಗೆ ಒಳ್ಳೆಯ ಅನಿಸಿಕೆ ಮೂಡಿಸಬೇಕು. ಆದರೆ ಸಿನೆಮಾದಲ್ಲಿ ಎಲ್ಲ ವಾಣಿಜ್ಯಾತ್ಮಕ ಅಂಶಗಳು ಇರಲಿವೆ" ಎನ್ನುತ್ತಾರೆ.
"ಉಪ್ಪಿಗಲ್ಲದೆ ಹೋಗಿದ್ದಾರೆ ಈ ಸ್ಕ್ರಿಪ್ಟ್ ಕಸದಬುಟ್ಟಿಗೆ ಬೀಳುತ್ತಿತ್ತು" ಎಂದು ಈ ಸಿನೆಮಾ ಉಪೇಂದ್ರ ಅವರಿಗಾಗಿಯೇ ಬರೆದದ್ದು ಎನ್ನುತ್ತಾರೆ ಉದಯ್.
ಉಪೇಂದ್ರ ಸದ್ಯಕ್ಕೆ ಪ್ರೇಮ ಅವರ ಜೊತೆಗೆ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಸಿನೆಮಾದಲ್ಲಿ ಕಾರ್ಯನಿರತರಾಗಿದ್ದು, 'ಮೋದಿ' ಅಕ್ಟೋಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ.