'ದೊಡ್ಮನೆ' ನಟರು ಪುನೀತ್ ರಾಜಕುಮಾರ್ ಮತ್ತು ಕೃಷ್ಣ ನಾಗಪ್ಪ
ಬೆಂಗಳೂರು: ತಾವೇ ಹೀರೊ ಆಗಿ ನಟಿಸಿದ ಚಿತ್ರಗಳು ತಮ್ಮ ಇಮೇಜ್ ಬೆಳೆಯುವುದಕ್ಕೆ ಹೆಚ್ಚು ಸಹಾಯ ಮಾಡುತ್ತವೆ ಎಂದು ನಂಬುವ ನಟ ಕೃಷ್ಣ ನಾಗಪ್ಪ, ಪ್ರತಿಭಾ ಗುಂಪಿನ ನಡುವೆ ನಟಿಸುವುದು ಒಬ್ಬನ ಸಾಮರ್ಥ್ಯವನ್ನು ಮತ್ತು ಜನಪ್ರಿಯತೆಯನ್ನು ಒರೆಗೆ ಹಚ್ಚುತ್ತದೆ ಎನ್ನುತ್ತಾರೆ. 'ಮುಂಬೈ' ಮತ್ತು 'ಹುಚ್ಚ 2' ಸಿನೆಮಾಗಳಲ್ಲಿ ಸ್ವತಂತ್ರವಾಗಿ ಈಗಾಗಲೇ ನಟಿಸಿರುವ ನಟ ಈಗ 'ದೊಡ್ಮನೆ ಹುಡುಗ' ಸಿನೆಮಾದಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
"ಈ ರೀತಿಯ ಸಿನೆಮಾಗಳು ದಶಕಕ್ಕೊಂದು ಬರುವುದು. ನಿರ್ದೇಶಕ ಸೂರಿ ಚಿತ್ರರಂಗದ ದೊಡ್ಡ ದೊಡ್ಡ ನಟರನ್ನು ಆಯ್ಕೆ ಮಾಡಿಕೊಂಡು ಜೀವನಕ್ಕೂ ದೊಡ್ಡದಾದ ಸಿನೆಮಾ ಮಾಡಿದ್ದಾರೆ" ಎನ್ನುತ್ತಾರೆ ನಟ ಕೃಷ್ಣ.
ಈ ಸಿನೆಮಾದಲ್ಲಿ ಅಂಬರೀಷ್, ಭಾರತಿ ವಿಷ್ಣುವರ್ಧನ್, ಸುಮಲತಾ, ಪುನೀತ್ ರಾಜಕುಮಾರ್, ರಾಧಿಕಾ ಪಂಡಿತ್, ರವಿಶಂಕರ್, ರಂಗಾಯಣ ರಘು, ಚಿಕ್ಕಣ್ಣ ಹೀಗೆ ಖ್ಯಾತ ನಂತರ ದೊಡ್ಡ ತಾರಾಗಣದ ಪಟ್ಟಿಯೇ ಇದೆ. "ಇಂತಹ ಸಿನೆಮಾಗಳ ಭಾಗವಾಗುವುದಕ್ಕೆ ಪ್ರೇರೇಪಿಸುವ ಕೆಲವು ಅಂಶಗಳಿರುತ್ತವೆ. ಇದರಲ್ಲಿ ಸೂರಿ ಅಂಶವು ಒಂದು. ನಾನು ಅವರ ಸಿನೆಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಾನು ಈ ಸಿನೆಮಾದ ಕಥೆಯನ್ನು ಕೇಳಲಿಲ್ಲ ನನ್ನ ಪಾತ್ರದ ಬಗ್ಗೆಯೂ. ನಾನು ಮೇಕಪ್ ಹಾಕಿದ ಮೇಲೆಯೇ ಅವರು ಅದನ್ನು ನನಗೆ ವಿವರಿಸಿದ್ದು. ಇದೆಲ್ಲವೂ ಸೂರಿ ಅವರ ಮೇಲೆ ಇರುವ ಗೌರವದಿಂದಲೇ ಸಾಧ್ಯವಾಗಿದ್ದು" ಎನ್ನುತ್ತಾರೆ.
ಈ ಸಿನೆಮಾದಲ್ಲಿ ಪುನೀತ್ ಅವರ ಸಹೋದರನ ಪಾತ್ರವನ್ನು ಕೃಷ್ಣ ನಿರ್ವಹಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಸಿನೆಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ.