ಹಂಬಲ್ ಪೊಲಿಟಿಶಿಯನ್ ನೊಗರಾಜ್
ಬೆಂಗಳೂರು: 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಟೀಸರ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಕಾರ್ಮಿಕರ ದಿನಾಚರಣೆಯಾದ ಮೇ ೧ ರಂದು ಟೀಸರ್ ಬಿಡುಗಡೆಯಾಗಲಿದೆಯಂತೆ. ನೊಗರಾಜ್ ಪಾತ್ರ ನಿರ್ವಹಿಸುತ್ತಿರುವ ಡ್ಯಾನಿಶ್ ಸೈಟ್ ಜೊತೆಗೆ ಸುಮುಖಿ ಸುರೇಶ್, ರೋಜರ್ ನಾರಾಯಣ್ ಮತ್ತು ಶ್ರುತಿ ಹರಿಹರನ್ ನಟಿಸುತ್ತಿರುವ ಈ ಸಿನೆಮಾದಲ್ಲಿ ಹಲವು ಕುತೂಹಲ ಸಂಗತಿಗಳಿವೆಯಂತೆ.
ಸಿನೆಮಾದ ಅರ್ಧದಷ್ಟು ಚಿತ್ರೀಕರಣ ಈಗ ಮುಗಿದಿದ್ದು, ಟೀಸರ್ "ನಮ್ಮ ತಂಡದ ಹುಚ್ಚಾಟ, ಸುಗ್ಗಿ ಮತ್ತು ಚೈತನ್ಯವನ್ನು" ಸೆರೆ ಹಿಡಿಯಲಿದೆ. "ಟೀಸರ್ ಮೊದಲ ಕಟ್ ನೋಡಿರುವವರೆಲ್ಲರೂ ಇದನ್ನು ಇಷ್ಟ ಪಟ್ಟಿದ್ದಾರೆ. ಇತರ ಪ್ರೇಕ್ಷಕರು ಕೂಡ ಇದೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ನಂಬಿದ್ದೇನೆ" ಎನ್ನುತ್ತಾರೆ ನಿರ್ದೇಶಕ ಸಾದ್ ಖಾನ್.
ಈ ಟೀಸರ್ ಮಾಮೂಲಿಗಿಂತಲೂ ಉದ್ದವಾಗಿದೆ ಎನ್ನುವ ಅವರು "ಡ್ಯಾನಿ (ಡ್ಯಾನಿಶ್ ಸೈಟ್) ಇದನ್ನು ಇಷ್ಟ ಪಟ್ಟರು. ಏಕೆಂದರೆ ಅವರು ಇತರರಿಗಿಂತ ಜನರನ್ನು ಹೆಚ್ಚು ಕೀಟಲೆ ಮಾಡಲು ಇಚ್ಛಿಸುತ್ತಾರೆ. ಇದು ಅವರ ಚೊಚ್ಚಲ ಚಿತ್ರ ಮತ್ತು ಟೀಸರ್ ಹೊರಬೀಳಲು ಕಾತರದಿಂದ ಕಾಯುತ್ತಿದ್ದಾರೆ" ಎನ್ನುವ ಸಾದ್ "ಈ ಸಿನೆಮಾ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ" ಎನ್ನುತ್ತಾರೆ. ಸಿನೆಮಾ ಬಗ್ಗೆ ಹೆಚ್ಚಿನ ವಿವರ ನೀಡಿ ಎಂದರೆ ಅದರ ಬಗ್ಗೆ ತಮಾಷೆ ಮಾಡುವ ಅವರು "ಈ ಟೀಸರ್ ಚುನಾವಣಾ ಪ್ರಣಾಳಿಕೆ ರೀತಿಯದ್ದು. ಇದರಲ್ಲಿ ಭರವಸೆಗಳಿವೆ. ಅದೃಷ್ಟವಶಾತ್ ನಾವು ರಾಜಕಾರಣಿಗಳಲ್ಲ. ಆದುದರಿಂದ ನಮ್ಮ ಭರವಸೆಗಳನ್ನು ಈಡೇರುಸುತ್ತೇವೆ" ಎನ್ನುತ್ತಾರೆ.
ಈ ಸಿನೆಮಾವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಅವರ ಸಹ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಜೀತ್ ಸಿಂಗ್ ಸಂಗೀತ ನೀಡಿದ್ದು, ಕರ್ಮ್ ಚಾವ್ಲಾ ಅವರ ಸಂಗೀತ ಚಿತ್ರಕ್ಕಿದೆ.