ಕಾಲೇಜ್ ಕುಮಾರ ಚಿತ್ರದ ದೃಶ್ಯ
ಹರಿ ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ ಚಿತ್ರ ಈ ವಾರ 50 ದಿನಗಳ ಪ್ರದರ್ಶನ ಪೂರೈಸುತ್ತಿದೆ.ವಿಶೇಷ ಸ್ಕ್ರಿಪ್ಟ್, ತಂದೆ ಕಾಲೇಜಿಗೆ ಹೋಗಿ ಮಗ ಮನೆಯ ಜವಾಬ್ದಾರಿ ವಹಿಸಿಕೊಳ್ಳುವುದು ಜನರ ಮನಸ್ಸನ್ನು ಗೆದ್ದಿದೆ. ರವಿಶಂಕರ್, ಶೃತಿ, ವಿಕ್ಕಿ ಮತ್ತು ಸಂಯುಕ್ತಾ ಚಿತ್ರದಲ್ಲಿ ನಟಿಸಿದ್ದಾರೆ.
ದಕ್ಷಿಣ ಭಾರತೀಯ ಭಾಷೆಗಳಲ್ಲಿ ಡಬ್ ಆಗಿರುವ ಕಾಲೇಜ್ ಕುಮಾರ್ ಬಾಲಿವುಡ್ ಗೂ ತಲುಪಿದ್ದು ನಿರ್ದೇಶಕ ಸತೀಶ್ ಕೌಶಿಕ್ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ನಿರ್ಮಾಪಕ ಎಲ್.ಪದ್ಮನಾಭ್ ಕಳೆದ ವಾರ ಕೌಶಿಕ್ ರನ್ನು ಭೇಟಿ ಮಾಡಿ ಬಾಲಿವುಡ್ ನ ಕೆಲವು ನಿರ್ದೇಶಕರಿಗೆ ಚಿತ್ರ ನೋಡಲು ವ್ಯವಸ್ಥೆ ಮಾಡಿದ್ದರು. ಮಲಾಯಳಂ, ತೆಲುಗು, ತಮಿಳು ಮತ್ತು ಬಾಲಿವುಡ್ ನ ನಟರು, ನಿರ್ದೇಶಕರು ಚಿತ್ರ ವೀಕ್ಷಿಸಿದ್ದು ರಿಮೇಕ್ ಗೆ ಒಲವು ತೋರಿಸಿದ್ದಾರೆ. ಯಾರು ಮೊದಲು ಚಿತ್ರವನ್ನು ರಿಮೇಕ್ ಮಾಡುತ್ತಾರೆ ಎಂಬುದು ಈಗಿರುವ ಕುತೂಹಲ.
ಕಾಲೇಜ್ ಕುಮಾರ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಎ.ಅಜ್ಹಗಾನ್ ಅವರ ಛಾಯಾಗ್ರಹಣವಿದೆ.