ಸಿನಿಮಾ ಸುದ್ದಿ

"ಅಲೆಮಾರಿ" ಸಂತು ನಿರ್ದೇಶನದ ಚಿತ್ರಕ್ಕೆ "ಕೆಂಡಸಂಪಿಗೆ" ವಿಕ್ಕಿ ನಾಯಕ

Srinivasamurthy VN

ಬೆಂಗಳೂರು: ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಾಯಕ ನಟ ಎಂದು ಛಾಪು ಮೂಡಿಸಿದ್ದ ನಟ ವಿಕ್ಕಿ ವರುಣ್ ಬರೊಬ್ಬರಿ ಒಂದೂವರೆ ವರ್ಷದ ಬಳಿಕ  ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಈ ಹಿಂದೆ ಅಲೆಮಾರಿ ಚಿತ್ರ ನಿರ್ದೇಶಿಸಿದ್ದ ಸಂತೋಷ್ ಅಲಿಯಾಸ್ ಅಲೆಮಾರಿ ಸಂತು ನಿರ್ದೇಶನದ ಚಿತ್ರದಲ್ಲಿ ವಿಕ್ಕಿ ವರುಣ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸ್ವತಃ ನಿರ್ದೇಶಕ ಸಂತು ಸ್ಪಷ್ಟನೆ ನೀಡಿದ್ದಾರೆ.  ನಗರದಿಂದ ಹಳ್ಳಿಗೆ ತೆರಳು ಹುಡುಗನ ಪಾತ್ರಕ್ಕಾಗಿ ನಾನು ನಟನನ್ನು ಹುಡುಕುತ್ತಿದ್ದೆ. ಆಗ ನನಗದೆ ಸಿಕ್ಕಿದ್ದೇ ವಿಕ್ಕಿ. ಈ ಪಾತ್ರಕ್ಕೆ ವಿಕ್ಕಿ ವರುಣ್ ತುಂಬಾ ಚೆನ್ನಾಗಿ ಒಗ್ಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ಈ ಚಿತ್ರವನ್ನು  ಒಪ್ಪಿಕೊಳ್ಳುವುದಕ್ಕೂ ಮೊದಲು ವಿಕ್ಕಿ ಸುಮಾರು 30 ಕಥೆಗಳನ್ನು ಕೇಳಿದ್ದರಂತೆ. ಆದರೆ ಆ ಕಥೆಗಳಾವುದೂ ವಿಕ್ಕಿಗೆ ಒಪ್ಪಿಗೆಯಾಗದ ಕಾರಣ ಈ ವರೆಗೂ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ.

ಈ ಬಗ್ಗೆ ಕೇಳಿದಾಗ ಉತ್ತರಿಸಿದ ನಟ ವಿಕ್ಕಿ, ನಿರ್ದೇಶಕ ಸಂತು ನನಗೆ ಸುಮಾರು 1 ವರ್ಷದಿಂದ ಪರಿಚಯ. ನಾನು ಇಷ್ಟಪಡುವ ಕಥೆ ದೊರಯದಿದ್ದ ಕಾರಣದಿಂದಲೇ ನಾನು ಒಂದೂವರ ವರ್ಷ ಕಾದೆ. ಈಗ ಸಂತು ಅವರ  ಕಥೆಯನ್ನು ಒಪ್ಪಿಕೊಂಡಿದ್ದೇನೆ. ಚಿತ್ರರಂಗದಲ್ಲಿ ನನಗೆ ಅತ್ಯುತ್ತಮ ಆರಂಭ ದೊರೆಯಿತು. ಹೀಗಾಗಿ ನನ್ನ ಎರಡನೇ ಪಯಣವನ್ನು ತುಂಬಾ ಜಾಗರೂಕನಾಗಿ ಆರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಇಷ್ಟು ತಡ ಮಾಡಿದೆ. ನನ್ನ ಪ್ರಕಾರ  ಸಂತು ಓರ್ವ ಉತ್ತಮ ಕಥೆಗಾರ ಮತ್ತು ನಿರ್ದೇಶಕ. ಚಿಕ್ಕದಾಗಿ ಮತ್ತು ಮನಃಮುಟ್ಟುವಂತೆ ನನಗೆ ಕಥೆ ಹೇಳಿದ್ದರು. ಇದೀಗ ಆ ಚಿಕ್ಕ ಕಥೆಯನ್ನೇ ಬೆಳೆಸಿ ಸಿನಿಮಾ ಮಾಡಲಾಗುತ್ತಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಸಿದ್ಧತೆ  ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸುತ್ತೇವೆ ಎಂದು ವಿಕ್ಕಿ ವರುಣ್ ಹೇಳಿದ್ದಾರೆ.

SCROLL FOR NEXT