ಬಾಲಿವುಡ್ ನಟ ಶಾಹಿದ್ ಕಪೂರ್ 
ಸಿನಿಮಾ ಸುದ್ದಿ

ಮಹಿಳೆಯರು ಪುರುಷರಿಂಗಿಂತ ಹಲವು ಬಗೆಗಳಲ್ಲಿ ಶ್ರೇಷ್ಠ: ಶಾಹಿದ್ ಕಪೂರ್

ಮಹಿಳೆಯರು ಪುರುಷರಿಂಗಿಂತ ಹಲವು ಬಗೆಗಳಲ್ಲಿ ಶ್ರೇಷ್ಠ ಎಂದು ಎಂದು ಬಾಲಿವುಡ್ ನಟ ಶಾಹಿದ್ ಕಪೂರ್ ಹೇಳಿದ್ದಾರೆ.

ಮುಂಬೈ: ಮಹಿಳೆಯರು ಪುರುಷರಿಂಗಿಂತ ಹಲವು ಬಗೆಗಳಲ್ಲಿ ಶ್ರೇಷ್ಠ ಎಂದು ಎಂದು ಬಾಲಿವುಡ್ ನಟ ಶಾಹಿದ್ ಕಪೂರ್ ಹೇಳಿದ್ದಾರೆ. 
"ತಾಯಿ ಮಾಡುವ ಕೆಲಸಕ್ಕೆ ಯಾವ ಪುರುಷನು ಸಮ ಇಲ್ಲ. ಮಹಿಳೆಯರು ಪುರುಷರಿಂಗಿಂತ ಹಲವು ಬಗೆಗಳಲ್ಲಿ ಶ್ರೇಷ್ಠ. ಅವರನ್ನು ಮೆಚ್ಚುವುದನ್ನು ಮತ್ತು ಶ್ಲಾಘಿಸುವುದನ್ನು ಕಲಿತುಕೊಳ್ಳೋಣ. ಅವರಿಗೆ ಪ್ರೀತಿ ತೋರಿಸುವುದನ್ನು ಕಲಿತುಕೊಳ್ಳೋಣ. ಪ್ರತಿ ದಿನ" ಎಂದು ೩೫ ವರ್ಷದ ನಟ ಬುಧವಾರ ಟ್ವೀಟ್ ಮಾಡಿದ್ದಾರೆ. 
ನಟ ತಮ್ಮ ಪತ್ನಿ ಮೀರಾ ರಾಜಪುತ್ ಅವರೊಂದಿಗೆ ಕಳೆದ ಆಗಸ್ಟ್ ೨೬ ರಂದು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. 
ನಟನೆಗೆ ಸಂಬಂಧಿಸಿದಂತೆ ಶಾಹಿದ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೊತೆಗೆ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ವಿಶಾಲ್ ಭಾರದ್ವಾಜ್ ನಿರ್ದೇಶನದ 'ರಂಗೂನ್' ಸಿನೆಮಾದಲ್ಲಿ ಕೂಡ ನಟಿಸಿದ್ದಾರೆ. 
ಎರಡನೇ ವಿಶ್ವಯುದ್ಧದ ಹಿನ್ನಲೆಯಲ್ಲಿ ನಡೆಯುವ 'ರಂಗೂನ್' ಸಿನೆಮಾದಲ್ಲಿ ಸೈಫ್ ಅಲಿ ಖಾನ್ ಕೂಡ ನಟಿಸಿದ್ದಾರೆ. ಈ ಸಿನೆಮಾ ಫೆಬ್ರವರಿ ೨೪ ರಂದು ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!