ಸಾಯಿಕೃಷ್ಣ ಮತ್ತು ಸಾಯಿಕುಮಾರ್ ರಿಯಲ್ ಪೊಲೀಸ್ ಚಿತ್ರದಲ್ಲಿ
ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಸಲ ಅಸಮಾಧಾನವಾಗಿದೆ. ಅದಕ್ಕೆ ಕಾರಣ ಅವರ 98ನೇ ಚಿತ್ರ ರಿಯಲ್ ಪೊಲೀಸ್ ನ್ನು ಸೆನ್ಸಾರ್ ಮಂಡಳಿ ಪರಿಗಣಿಸಿದ ರೀತಿ.
ಕುಟುಂಬ ಜೀವನ ಆಧಾರಿತ ಕಥೆಗಳನ್ನೇ ಹೆಚ್ಚಾಗಿ ಮಾಡುವ ನಿರ್ದೇಶಕ ಸಾಯಿ ಪ್ರಕಾಶ್ ಅವರ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಗುತ್ತಿದ್ದರೆ ಈ ಬಾರಿ ಯು/ಎ ಸರ್ಟಿಫಿಕೇಟ್ ಸಿಕ್ಕಿರುವುದೇ ಅವರ ನಿರಾಸೆಗೆ ಕಾರಣವಾಗಿದೆ.
ಚಿತ್ರದಲ್ಲಿ 15 ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿದೆ. ಮತ್ತು 2 ನಿಮಿಷ 27 ಸೆಕೆಂಡುಗಳನ್ನು ಬಿಟ್ಟು ಬಿಡಲಾಗಿದೆ. ಚಿತ್ರದಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಹೇಳಿರುವುದರಿಂದ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ಭಿನ್ನವಾಗಿ ಪರಿಗಣಿಸಿದೆ ಎನ್ನುತ್ತಾರೆ ಸಾಯಿ ಪ್ರಕಾಶ್ ಪುತ್ರ ಸಾಯಿ ಕೃಷ್ಣ.
ಚಿತ್ರ ಸಂದೇಶ ಭರಿತವಾಗಿರುವುದರಿಂದ ಕೆಲವು ಸಂಭಾಷಣೆಗಳು ಅಗತ್ಯವಾಗಿತ್ತು. ಆದರೆ ನನ್ನ ಸಂಭಾಷಣೆ ಸೇರಿದಂತೆ ಅನೇಕ ಮಾತಿನ ದೃಶ್ಯಗಳಿಗೆ ಕತ್ತರಿ ಹಾಕಲು ಹೇಳಿದ್ದಾರೆ. ನನ್ನ ಭಾಗದ ಇಡೀ ದೃಶ್ಯಗಳನ್ನು ಮತ್ತೆ ಚಿತ್ರೀಕರಿಸುವಂತೆ ಹೇಳಿದರು. ಆದರೆ ನನ್ನ ತಂದೆ ಒಪ್ಪಲಿಲ್ಲ. ಹಾಗಾಗಿ ನನ್ನ ಮತ್ತು ಸಾಯಿ ಕುಮಾರ್ ಮಧ್ಯದ ಆರು ಪ್ರತಿ ಸಂಭಾಷಣೆಯನ್ನು ತೆಗೆದುಹಾಕಲಾಗಿದೆ ಎಂದು ಸಾಯಿ ಕೃಷ್ಣ ಹೇಳಿದರು.
ನನ್ನ ತಂದೆಗೆ ಚಿತ್ರದಲ್ಲಿ ಈ ಪಾತ್ರವನ್ನು ನಾನೇ ಮಾಡಬೇಕೆಂದಿತ್ತು. ಯಾಕೆಂದರೆ ಬೇರೆ ನಟರನ್ನು ಕರೆತಂದು ವಿವಾದ ಸೃಷ್ಟಿಸುವ ಮನಸ್ಸಿರಲಿಲ್ಲ. ಈ ಚಿತ್ರದಿಂದಾಗಿ ಒಂದು ವಿಷಯವಂತೂ ನಮಗೆ ಮನದಟ್ಟಾಯಿತು, ಅದೇನೆಂದರೆ ವಸ್ತುಸ್ಥಿತಿಯನ್ನು ನಾಲ್ಕು ಗೋಡೆಗಳ ಮಧ್ಯೆ ಹೇಳಬೇಕಾಗುತ್ತದೆ. ಬಹಿರಂಗವಾಗಿ ಹೇಳಿದರೆ ಒಪ್ಪುವುದಿಲ್ಲ ಎಂಬುದು ಎನ್ನುತ್ತಾರೆ ಸಾಯಿಕೃಷ್ಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics