ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಗೋಧಿ ಬಣ್ಣ.. ಹೇಮಂತ್ ಮುಂದಿನ ಚಿತ್ರಕ್ಕೆ 'ಪವರ್' ಪ್ರೊಡಕ್ಷನ್

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಮೂಲಕ ಯಶಸ್ವಿ ನಿರ್ದೇಶಕ ಹೇಮಂತ್ ಗೆ ಪವರ್ ಸ್ಟಾರ್ ಪುನೀತ್ ರಾಕ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡುವ ಅವಕಾಶ ದೊರೆತಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಮೂಲಕ ಯಶಸ್ವಿ ನಿರ್ದೇಶಕ ಹೇಮಂತ್ ಗೆ ಪವರ್ ಸ್ಟಾರ್ ಪುನೀತ್ ರಾಕ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡುವ ಅವಕಾಶ ದೊರೆತಿದೆ. 
ಹೇಮಂತ್ ಎಂ ರಾವ್ ನಿರ್ದೇಶನದ ಎರಡನೇ ಚಿತ್ರವನ್ನು ಕಾರ್ತಿಕ್ ಗೌಡ ಅವರೊಂದಿಗೆ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಲಿದ್ದು, ನಿನ್ನಿಂದಲೇ, ಮಾಸ್ಟರ್ ಪೀಸ್, ಕೆಜಿಎಫ್, ರಾಜಕುಮಾರ ಚಿತ್ರಗಳನ್ನು ನಿರ್ಮಿಸಿದ್ದ ಕಾರ್ಕಿತ್ ಫಿಲಮ್ಸ್ ನ ಮುಖ್ಯಸ್ಥ ಕಾರ್ತಿಕ್ ಗೌಡ ಸಹ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 
ಹೇಮಂತ್ ರಾವ್- ಪುನೀತ್ ರಾಜ್ ಕುಮಾರ್-ಕಾರ್ತಿಕ್ ಗೌಡ ಜೊತೆಗೂಡಿ ಮಾಡಲಿರುವ ಚಿತ್ರ ಥ್ರಿಲ್ಲರ್ ಚಿತ್ರವಾಗಿರಲಿದ್ದು, ಚಿತ್ರ ನಿರ್ಮಾಣದಲ್ಲಿ ಪುನೀತ್ ರಾಜ್ ಕುಮಾರ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಹಾಗೂ ನಾನು ಭೇಟಿ ಮಾಡಿದಾಗಲೆಲ್ಲಾ ಹೊಸ ಚಿತ್ರಕಥೆಗಳ ಬಗ್ಗೆ ಹೆಚ್ಚು ಚರ್ಚಿಸುತ್ತೇವೆ. ಹೇಮಂತ್ ಬರೆದಿರುವ ಚಿತ್ರಕಥೆಯನ್ನು ಕೇಳಿದ ನಂತರ ಇಬ್ಬರೂ ಚಿತ್ರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆವು ಎಂದು ಕಾರ್ತಿಕ್ ಹೇಳಿದ್ದಾರೆ. ಸಹ ನಿರ್ಮಾಣವಷ್ಟೆ ಅಲ್ಲದೇ, ನಿರ್ಮಾಣ ಪೂರ್ವ ಹಂತಗಳಿಂದಲೂ ಪುನೀತ್ ರಾಜ್ ಕುಮಾರ್ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಹೇಮಂತ್ ತಮ್ಮ ಮೊದಲ ಚಿತ್ರವನ್ನು ತಯಾರಿಕೆಯಲ್ಲಿ ತೋರಿದ ಬದ್ಧತೆ ಮೆಚ್ಚುಗೆಯಾಗಿದೆ ಈಗ ಅವರ ಎರಡನೇ ಚಿತ್ರಕ್ಕೆ ಪವರ್ ಸ್ಟಾರ್ ಎಂಟ್ರಿ ಆದ ನಂತರ ಯೋಜನೆ ಹೊಸ ದಿಕ್ಕಿನಲ್ಲಿ ತಯಾರಾಗುತ್ತಿದೆ ಎಂದು ಕಾರ್ತಿಕ್ ಸಂತಸ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್, ಸಂಕಲನಕಾರ ದೀಪು ಎಸ್ ಕುಮಾರ್ ಹೊಸ ಚಿತ್ರದ ಭಾಗವಾಗಿರಲಿದ್ದಾರೆ. ಉಳಿದ ಪಾತ್ರಗಳು ಹಾಗೂ ತಾಂತ್ರಿಕ ವರ್ಗದವರ ಬಗ್ಗೆ ಶೀಘ್ರವೇ ಮಾಹಿತಿ ಬಹಿರಂಗವಾಗಲಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

SCROLL FOR NEXT