ಮುಂಬೈ: 'ಶಿವಾಯ್' ಸಿನೆಮಾದ ಪ್ರಚಾರದ ವೇಳೆಯಲ್ಲಿ ಅಜಯ್ ದೇವಗನ್ ತಮ್ಮ ನಿರ್ದೇಶನದ ಮುಂದಿನ ಚಿತ್ರ 'ಸನ್ಸ್ ಆಫ್ ಸರ್ದಾರ್' ಘೋಷಿಸಿದ್ದರು. ಸರಗರ್ಹಿಯ ಯುದ್ಧದ ಮೇಲಿನ ಈ ಚಿತ್ರವನ್ನು ಹಾಲಿವುಡ್ ಖ್ಯಾತಿಯ '೩೦೦' ಸಿನೆಮಾದ ಮಟ್ಟಕ್ಕೆ ಕೊಂಡುಯ್ಯುವುದಾಗಿಯೂ ತಿಳಿಸಿದ್ದರು.
ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಒಂದಾಗಿ, ಇದೆ ವಿಷಯವಿರುವ ಸಿನೆಮಾವೊಂದನ್ನು ಅಕ್ಷಯ್ ಕುಮಾರ್ ನಟನೆಯಲ್ಲಿ ನಿರ್ಮಿಸುವುದಾಗಿ ಘೋಷಿಸಿದ ಮೇಲೆ ಅಜಯ್ ದೇವಗನ್ ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲ. ಆದರೆ ಈ ಸುದ್ದಿ ನಿಜ ಎಂದು ಈದ ಮೇಲೆ ಅವರಿಗೆ ನಿರಾಸೆಯಾಗಿತ್ತು.
ಈ ವಿಷಯವಾಗಿ ಸಲ್ಮಾನ್ ಖಾನ್ ಅವರಿಗೆ ಭಾವನಾತ್ಮಕ ಸಂದೇಶವನ್ನು ಅಜಯ್ ದೇವಗನ್ ಕಳುಹಿಸಿದ್ದಾರೆ ಎನ್ನಲಾಗಿದೆ. ತಮ್ಮ ಕುಟುಂಬದ ಸದಸ್ಯ ಎಂದೇ ಪರಿಗಣಿಸುವ ಸಲ್ಮಾನ್ ಅವರಿಗೆ, ಸಾದ್ಯವಾದರೆ ಈ ಸಿನೆಮಾ ಕೈಬಿಡುವಂತೆ ಕೋರಿದ್ದಾರಂತೆ. ಈಗಾಗಲೇ 'ಸನ್ಸ್ ಆಫ್ ಸರ್ದಾರ್' ಸಿನೆಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದು, ಇದೆ ವಿಷಯವಾಗಿ ನೀವು ಕೂಡ ಸಿನೆಮಾ ತೆಗೆಯಲು ಮುಂದಾದರೆ ಅದು ಸರಿಯಲ್ಲಿ ಎಂದು ಕೂಡ ತಿಳಿಸಿದ್ದಾರಂತೆ.
೧೯೯೯ ರ 'ಹಮ್ ದಿಲ್ ದೇ ಚುಕೆ ಸನಮ್' ಸಿನೆಮಾದಲ್ಲಿ ಒಟ್ಟಿಗೆ ನಟಿಸಿದ್ದಾಗಿಲಿಂದಲೂ ದೇವಗನ್ ಮತ್ತು ಸಲ್ಮಾನ್ ಅತ್ಯುತ್ತಮ ಗೆಳೆಯರು. ಈಗ ಈ ವಿವಾದವನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೋ ಎಂಬ ಕುತೂಹಲ ಸಿನೆರಸಿಕರಲ್ಲಿದೆ.