ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಅತ್ಯಾಚಾರ ಆರೋಪ: ಚೆನ್ನೈ ಎಕ್ಸ್'ಪ್ರೆಸ್ ಸಿನಿಮಾ ನಿರ್ಮಾಪಕನ ವಿರುದ್ಧ ಪ್ರಕರಣ ದಾಖಲು

ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಚೆನ್ನೈಎಕ್ಸ್ ಪ್ರೆಸ್' ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರ ಪ್ರಕರಣವೊಂದು ಗುರುವಾರ ದಾಖಲಾಗಿದೆ...

ನಿರ್ಮಾಪಕ ಕರೀಂ ಮೊರಾನಿ (ಸಂಗ್ರಹ ಚಿತ್ರ)
Manjula VN
Updated On : 19 Jan 2017, 9:34 am

ಚೆನ್ನೈ: ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಚೆನ್ನೈಎಕ್ಸ್ ಪ್ರೆಸ್' ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರ ಪ್ರಕರಣವೊಂದು ಗುರುವಾರ ದಾಖಲಾಗಿದೆ.

25 ವರ್ಷದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮೊರಾನಿಯವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಮುಂಬೈನಲ್ಲಿ ವಿವಿಧೆಡೆ ಅತ್ಯಾಚಾರ ನಡೆಸಿರುವುದಾಗಿ ಯುವತಿಯೊಬ್ಬಳು ನಿರ್ಮಾಪಕ ಮೊರಾನಿಯವರ ವಿರುದ್ದ ದೂರು ದಾಖಲಿಸಿದ್ದಳು. ಮೊರಾನಿಯವರ ವಿರುದ್ದ ಐಪಿಸಿ ಸೆಕ್ಷನ್ 417 (ಮೋಸ), 376 (ಅತ್ಯಾಚಾರ), 342 (ಅಕ್ರಮ ಬಂಧನ), 506 (ಬೆದರಿಕೆ), 493 (ಕಾನೂನುಬದ್ಧ ಮದುವೆಯಾಗುವುದಾಗಿ ನಂಬಿಕಿ ಮೋಸ) ಇನ್ನಿತರೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದ್ದು, ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಅತ್ಯಾಚಾರ ಆರೋಪವನ್ನು ಮೊರಾನಿಯವರು ತಿರಸ್ಕರಿಸಿದ್ದು, ಇದೊಂದು ನಕಲಿ ಮತ್ತು ಸುಳ್ಳು ಆರೋಪವಾಗಿದೆ. ನನ್ನ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿ ಈ ರೀತಿಯಾಗಿ ಆರೋಪವನ್ನು ಮಾಡಲಾಗಿದೆ ಎಂದುಹೇಳಿದ್ದಾರೆ.

ಕರೀಂ ಮೊರಾನಿ ಬಾಲಿವುಡ್ ಹಿಟ್ ಚಿತ್ರಗಳಾದ ಚೆನ್ನೈ ಎಕ್ಸ್ ಪ್ರೆಸ್, ಹ್ಯಾಪಿ ನ್ಯೂ ಇಯರ್, ರಾ ಒನ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments