ಬೆಂಗಳೂರು: ಧ್ರುವ ಸರ್ಜಾ ಕನ್ನಡದಲ್ಲಿ ಮೂರನೇ ಸಿನಮಾದಲ್ಲಿ ನಟಿಸುತ್ತಿದ್ದಾರೆ,
ತಮ್ಮದೇ ಆದ ವಿಭಿನ್ನ ಶೈಲಿಯ ನಟನೆ ಮೂಲಕ ಭಾರೀ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ.
ಪ್ರತಿಯೊಂದು ಪ್ರಾಜೆಕ್ಟ್ ನಲ್ಲಿ ಉತ್ತಮವಾದದ್ದನ್ನು ನೀಡಬೇಕೆಂಬ ಬಯಕೆ ಹೊಂದಿರುವ ಧ್ರುವ, ಮುಂದಿನ ಚಿತ್ರದಲ್ಲಿ ತಮ್ಮ ಡ್ಯಾನ್ಸ್ ಪ್ರದರ್ಶನಕ್ಕೆ ಒತ್ತು ನೀಡಲಿದ್ದಾರೆ.
ಭರ್ಜರಿ ಸಿನಿಮಾದಲ್ಲಿನ ಹಾಡೊಂದು ಧ್ರುವ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೊತ್ತಿಸಿದೆ. ಕಳೆದ ವಾರ ವಷ್ಟೇ ಈ ಹಾಡಿನ ಚಿತ್ರೀಕರಣ ಮುಕ್ತಾಯಗೊಂಡಿದೆ. ನಿರ್ದೇಶಕರಾಗಿ ಪರಿವರ್ತನೆಯಾಗಿರುವ ಡ್ಯಾನ್ಸ್ ಮಾಸ್ಟರ್ ಹರ್ಷ ಧ್ರುವ ಜೊತೆ ಫ್ಲೋರ್ ಡ್ಯಾನ್ಸ್ ನಲ್ಲಿ ಹೊಸ ಹೊಸ ಪ್ರಯೋಗ ಮಾಡಿದ್ದಾರೆ.
ಈ ಹೊಂದು ಶೈಲಿಗೆ ಹೆಚ್ಚಿನ ಸ್ಟ್ಯಾಮಿನಾ ಮತ್ತು ಹೆಚ್ಚಿನ ಫ್ಲೆಕ್ಸಿಬಿಟಿ ಬೇಕಾಗುತ್ತದೆ. ಇದಕ್ಕಾಗಿ ಧ್ರುವಾ ಕೂಡಾ ಸಜ್ಜಾಗಿದ್ದಾರೆ. ಈ ಹಾಡಿಗೆ ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದು, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. "ಇವನ ವಂಶ ಸರ್ಜಾ ರೀ, ಇವನು ಆಲ್ ವೇಸ್ ಭರ್ಜರಿ, ಸಿಂಬಲ್ ಧ್ರುವ ನಕ್ಷತ್ರ, ಟಚ್ ಮಾಡೋದು ಕಷ್ಟ ರೀ" ಎಂಬ ಸಾಂಗ್ ತಯಾರಾಗುತ್ತಿದೆ.
ಬಹದ್ದೂರ್ ಮತ್ತು ಅದ್ದೂರಿ ಸಿನಿಮಾಗಳಿಗಿಂತ ವಿಭಿನ್ನ ಅವತಾರ ಭರ್ಜರಿಯಲ್ಲಿದೆ, ಭರ್ಜರಿ ಸಿನಿಮಾಗೆ ಇಂಟ್ರುಡಕ್ಷರಿ ಸಾಂಗ್ ಬೇಕು ಎಂದಾಗ, ಹರ್ಷ ಮಾಸ್ಟರ್ ಒಂದು ಅಪರೂಪದ ಸೆಟ್ ಅನ್ನು ನನಗಾಗಿ ನಿರ್ಮಿಸಿದ್ದರು. ಇಡೀಯ ಡ್ಯಾನ್ಸ್ ಸೀಕ್ವೆನ್ಸ್ ಮಂಡಿ ಬಳಸಿ ಮಾಡುವುದಾಗಿದೆ, ಈ ಸ್ಟೆಪ್ ಗಾಗಿ ನಾನು ಒಂದು ವಾರ ಪ್ರಾಕ್ಟೀಸ್ ಮಾಡಿದ್ದೇನೆ ಎಂದು ಧ್ರುವ ಹೇಳಿದ್ದಾರೆ.
ಈ ಹಾಡಿನ ಕಾಸ್ಟ್ಯೂಮ್ ಗಾಗಿ ಪವಿತ್ರಾ ರೆಡ್ಡಿ ಡಿಸೈನ್ ಮಾಡಿದ್ದಾರೆ, ಜೊತೆಗೆ 80 ಮಂದಿ ನುರಿತ ನೃತ್ಯಗಾರರಿದ್ದಾರೆ, ಈ ಹಾಡಿನ ಶೂಟಿಂಗ್ ಗಾಗಿ ಮಿನರ್ವ ಮಿಲ್ ನಲ್ಲಿ ಸೆಟ್ ಹಾಕಲಾಗಿದೆ, ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಪುನೀತ್ ಬೆಸ್ಟ್ ಡ್ಯಾನ್ಸರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ನಾನು ಪುನೀತ್ ಅವರ ಹೆಜ್ಜೆಯನ್ನೇ ಅನುಸರಿಸುತ್ತಿದ್ದೇನೆ, ಪ್ರಭುದೇವ ಮತ್ತು ಪುನೀತ್ ನನಗೆ ಡ್ಯಾನ್ಸ್ ನಲ್ಲಿ ಸ್ಫೂರ್ತಿ ಎಂದು ಹೇಳಿದ್ದಾರೆ.
ಭರ್ಜರಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸಿನಿಮಾ ಡಿಸ್ಟ್ರಿಬ್ಯೂಷನ್ ಗೆ ಬಾರಿ ಬೇಡಿಕೆ ಹೆಚ್ಚಿದೆ. ಚೇತನ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ವೈಶಾಲಿ ದೀಪಕ್ ನಟಿಸಿದ್ದಾರೆ. ಹರಿಪ್ರಿಯಾ ಕೂಡ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics