ಅಕ್ಷರಾ ಹಾಸನ್ ಹಾಗೂ ನಟ ಕಮಲ್ ಹಾಸನ್ 
ಸಿನಿಮಾ ಸುದ್ದಿ

ಅಕ್ಷರಾ ಹಾಸನ್ ಮತಾಂತರ: ಧರ್ಮ ಮುಖ್ಯವಲ್ಲ, ಪ್ರೀತಿ ಮುಖ್ಯ ಎಂದ ನಟ ಕಮಲ್ ಹಾಸನ್

ಧರ್ಮ ಮುಖ್ಯವಲ್ಲ, ಪ್ರೀತಿ ಮುಖ್ಯ...ಜೀವನವನ್ನು ಆನಂದಿಸು ಎಂದು ಪುತ್ರಿ ಅಕ್ಷರಾ ಹಾಸನ್ ಅವರಿಗೆ ನಟ ಕಮಲ್ ಹಾಸನ್ ಅವರು ಶನಿವಾರ ಹೇಳಿದ್ದಾರೆ...

ನವದೆಹಲಿ: ಧರ್ಮ ಮುಖ್ಯವಲ್ಲ, ಪ್ರೀತಿ ಮುಖ್ಯ...ಜೀವನವನ್ನು ಆನಂದಿಸು ಎಂದು ಪುತ್ರಿ ಅಕ್ಷರಾ ಹಾಸನ್ ಅವರಿಗೆ ನಟ ಕಮಲ್ ಹಾಸನ್ ಅವರು ಶನಿವಾರ ಹೇಳಿದ್ದಾರೆ.
ಪ್ರತಿಭಾನ್ವಿತ ಯುವ ನಟಿ ಅಕ್ಷರಾ ಹಾಸನ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು, ಇದೀಗ ಭಾರೀ ಸುದ್ದಿ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಮಲ್ ಹಾಸನ್ ಅವರು,  ಮಗಳೇ ಧರ್ಮವನ್ನು ಬದಲಾವಣೆ ಮಾಡಿದ್ದೀಯಾ? ನಿನ್ನನ್ನು ಪ್ರೀತಿಸುತ್ತೇನೆ...ಧರ್ಮ ಮುಖ್ಯವಲ್ಲ, ಪ್ರೀತಿ ಮುಖ್ಯ. ಜೀವನವನ್ನು ಆನಂದಿಸು...ಲವ್...ಯುವರ್ ಬಪ್ಪಾ ಎಂದು ಹೇಳಿಕೊಂಡಿದ್ದಾರೆ. 
ತಂದೆಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಾನ್ವಿತ ಯುವ ನಟಿ ಅಕ್ಷರಾ ಅವರು, ಹಾಯ್ ಬಾಪೂಜಿ...ನಾನಿನ್ನೂ ಮತಾಂತರಗೊಂಡಿಲ್ಲ. ಈಗಲೂ ನಾನು ನಾಸ್ತಿಕಳಾಗಿಯೇ ಇದ್ದೇನೆ. ಬೌದ್ಧ ಧರ್ಮ ಒಬ್ಬ ವ್ಯಕ್ತಿಯ ಜೀವನದ ಮಾರ್ಗವಾಗಿದ್ದು, ಬೌದ್ಧ ಧರ್ಮದ ಜೀವನ ವಿಧಾನವನ್ನು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!