ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ನಾಯಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ನಿಜಕ್ಕೂ ಲವ್ ಇದೆಯಾ, ಅವರಿಬ್ಬರು ಮದುವೆಯಾಗುತ್ತಿದ್ದಾರಾ ಅಥವಾ ಸುಮ್ಮನೆ ಹಬ್ಬಿದ ಗಾಸಿಪ್ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ. ಅದಕ್ಕೆ ಕಾರಣ ಕೆಲ ದಿನಗಳ ಹಿಂದೆ ರಕ್ಷಿತ್ ಹಾಗೂ ರಶ್ಮಿಕಾ ಮಧ್ಯೆ ಅಫೇರ್ ಇದ್ದು, ಅವರಿಬ್ಬರು ಮದುವೆಯಾಗಲಿದ್ದಾರೆಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು.
ಆದರೆ ಈಗ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಜುಲೈ 3 ರಂದು ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಜುಲೈ 3 ರಂದು ರಕ್ಷಿತ್ ಹಾಗೂ ರಶ್ಮಿಕಾ ಅವರ ನಿಶ್ಚಿತಾರ್ಥ ಕುಶಾಲನಗರದಲ್ಲಿ ನಡೆಯಲಿದ್ದು, ಎರಡು ಕುಟುಂಬ ಹಾಗೂ ಅವರ ಆಪೆ¤ಷ್ಟರಷ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಮೂಲಕ "ಕಿರಿಕ್ ಪಾರ್ಟಿ' ಚಿತ್ರದ ಕರ್ಣ ಹಾಗೂ ಸಾನ್ವಿ ಒಂದಾಗುತ್ತಿದ್ದಾರೆ. ರಕ್ಷಿತ್ ಕಥೆ ಬರೆದು, ನಾಯಕರಾಗಿ ನಟಿಸಿರುವ "ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಲಾಂಚ್ ಆದವರು ರಶ್ಮಿಕಾ ಮಂದಣ್ಣ.