ಬೆಂಗಳೂರು: 'ನೀರ್ ದೋಸೆ' ಸಿನೆಮಾ ವಾಣಿಜ್ಯ ಯಶಸ್ಸು ಕಂಡ ಬೆನ್ನಲ್ಲಿಯೇ ನಿರ್ದೇಶಕ ವಿಜಯ್ ಪ್ರಸಾದ್ ಮುಂದಿನ ಸಿನೆಮಾಗೆ ಸಜ್ಜಾಗುತ್ತಿದ್ದಾರೆ.
ವಿನೂತನ ತಾರಾಗಣವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಸರುವಾಸಿಯಾಗಿರುವ ನಿರ್ದೇಶಕ ಇನ್ನು ಹೆಸರಿಡದ ಈ ಚಿತ್ರಕ್ಕೆ ರವಿಶಂಕರ್ ಗೌಡ ಅವರನ್ನು ನಾಯಕನಟನ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಸಿನೆಮಾಗಳಲ್ಲಿ ರವಿಶಂಕರ್ ಹೀರೊ ಆಗಿ ನಟಿಸಿದ್ದರೂ, ಸಾಮಾನ್ಯವಾಗಿ ಪೋಷಕ ನಟರಾಗಿಯೇ ಜನಪ್ರಿಯ.
ಜನಪ್ರಿಯ ಧಾರವಾಹಿ 'ಸಿಲ್ಲಿ ಲಲ್ಲಿ' ದಿನಗಳಿಂದಲೂ ನಿರ್ದೇಶಕ ಮತ್ತು ನಟ ಗೆಳೆಯರಂತೆ. ರವಿಶಂಕರ್ ಅವರ ಶಕ್ತಿಯನ್ನು ಬಲ್ಲ ವಿಜಯಪ್ರಸಾದ್, ನಾಯಕ ನಟನ ಆಯ್ಕೆ ಅಂತಿಮಗೊಳಿಸಿಯೇ ನಿರ್ಮಾಪಕರ ಬಳಿ ತೆರಳಿದ್ದಾರೆ ಎನ್ನುತ್ತವೆ ಮೂಲಗಳು.
"ನಟ ಸ್ಕ್ರೀನ್ ಮೇಲೆ ಈರೇ ಗೌಡ ಆಗಿ ಬರಲಿದ್ದಾರೆ... ಈ ಪಾತ್ರ ಅವರಿಗೆ ಬಹಳವಾಗಿ ಒಪ್ಪುತ್ತದೆ" ಎನ್ನುವ ವಿಜಯಪ್ರಸಾದ್ "ನಾನು ಪ್ರತಿ ಪಾತ್ರಕ್ಕೆ ಸರಿಯಾದ ನಟನನ್ನು ಆಯ್ಕೆ ಮಾಡುವುದರಲ್ಲಿ ನಿಸ್ಸೀಮ" ಎನ್ನುತ್ತಾರೆ.
ಸಿನೆಮಾ ಶೀರ್ಷಿಕೆಗಾಗಿ ಮಂಥನ ಜಾರಿಯಲ್ಲಿದ್ದು, ಚಿತ್ರೀಕರಣ ಏಪ್ರಿಲ್ ನಿಂದ ಪ್ರಾರಂಭವಾಗಲಿದೆಯಂತೆ. ಸುಧೀರ್ ಮತ್ತು ಸನತ್ ಈ ಸಿನೆಮಾ ನಿರ್ಮಿಸುತ್ತಿದ್ದು ಯೋಗರಾಜ್ ಭಟ್ ಬ್ಯಾನರ್ ಅಡಿ ಈ ಸಿನೆಮಾ ಮೂಡಿಬರಲಿದೆ. ಅನೂಪ್ ಸೀಳಿನ್ ಸಂಗೀತ, ಸುಜ್ಞಾನ್ ಸಿನೆಮ್ಯಾಟೋಗ್ರಫಿ ಮತ್ತು ಸುರೇಶ ಅರಸ್ ಅವರ ಸಂಕಲನ ಚಿತ್ರಕ್ಕಿದೆ.
"'ಸಿಲ್ಲಿ ಲಲ್ಲಿ' ನಮ್ಮಿಬ್ಬರನ್ನು ಹಾಸ್ಯಕ್ಕೆ" ಪರಿಚಯಿಸಿತು ಎನ್ನುವ ನಟ ರವಿಶಂಕರ್ ವಿಜಯಪ್ರಸಾದ್ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ. "'ಸಿಲ್ಲಿ ಲಲ್ಲಿ' ಧಾರಾವಾಹಿ ಸಮಯದಲ್ಲಿ ನಾನು ನಟನಾಗಿ ಮತ್ತು ಅವರು ನಿರ್ದೇಶಕನಾಗಿ ನಮಗೆ ಒಳ್ಳೆ ಕೆಮಿಸ್ಟ್ರಿ ಇತ್ತು. ನನ್ನ ಹಾಸ್ಯ ಟೈಮಿಂಗ್ ಬಗ್ಗೆ ಅವರಿಗೆ ಬಹಳ ಮೆಚ್ಚುಗಿಯಿದೆ. ಅದನ್ನು ಹೊರತೆಗೆಯುವುದಕ್ಕೆ ಅವರಿಗೆ ಶಕ್ತಿಯಿದೆ" ಎನ್ನುತ್ತಾರೆ ನಟ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos