ವೇದಿಕಾ 
ಸಿನಿಮಾ ಸುದ್ದಿ

ಕೇವಲ ಗ್ಲಾಮರ್ ಗೆ ಸೀಮಿತವಾಗೋಲ್ಲ: ವಿಭಿನ್ನ ಪಾತ್ರಗಳ ಜೊತೆ ಪ್ರಯೋಗ ಇಷ್ಟ: ವೇದಿಕಾ

016 ರ ಬ್ಲಾಕ್ ಬಸ್ಟರ್ ಸಿನಿಮಾ ಶಿವಲಿಂಗ ಚಿತ್ರದ ನಾಯಕಿ ವೇದಿಕಾ ಮತ್ತೊಂದು ಆಸಕ್ತಿದಾಯಕ ಕಥೆಯುಳ್ಳ ಸಿನಿಮಾದಲ್ಲಿ ...

ಬೆಂಗಳೂರು: 2016 ರ ಬ್ಲಾಕ್ ಬಸ್ಟರ್ ಸಿನಿಮಾ ಶಿವಲಿಂಗ ಚಿತ್ರದ ನಾಯಕಿ ವೇದಿಕಾ ಮತ್ತೊಂದು ಆಸಕ್ತಿದಾಯಕ ಕಥೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಲಯಾಳಂನ ಉಸ್ತಾದ್ ಹೋಟೆಲ್ ಕನ್ನಡ  ರಿಮೇಕ್ ಗೌಡ್ರು ಹೋಟೆಲ್ ಸಿನಿಮಾದಲ್ಲಿ ವೇದಿಕಾ ಅಭಿನಯಿಸುತ್ತಿದ್ದಾರೆ. ಪಿ.ಕುಮಾರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ವೇದಿಕೆ ಜೊತೆ ಪ್ರಕಾಶ್ ರಾಜ್ ರೈ, ರಚನ್ ಚಂದ್ರ ಕೂಡ ಅಭಿನಯಿಸಲಿದ್ದಾರೆ. ಚಿತ್ರದ ಸಂಬಂಧ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ವೇದಿಕಾ, ಸದಾ ಕನ್ನಡ ಪ್ರೇಕ್ಷಕರಿಗೆ ಇದೊಂದು ಹೊಸ ಸಿನಿಮಾ. ಎಲ್ಲಾ ಸಿನಿಮಾಗಳಂತೆ ಈ ಸಿನಿಮಾ ಕಥೆಯಿಲ್ಲ  ವಿಭಿನ್ನವಾಗಿದೆ, ಶಿವಲಿಂಗ ನಂತರ ನಾನು 5 ಸಿನಿಮಾಗಳಲ್ಲಿ ನಟಿಸಿದೆ. ಉತ್ತಮ ಕಥೆಗಾಗಿ ನಾನು ಕಾಯುತ್ತಿದ್ದೆ. ಉಪೇಂದ್ರ ಜೊತೆ ಕಣ್ಣೇಶ್ವರ ಹಾಗೂ ಗೌಡ್ರು ಹೋಟೆಲ್ ಕಥೆ ಇಷ್ವಾಗಿ ಸಿನಿಮಾ ಆಯ್ಕೆ ಮಾಡಿದೆ ಎಂದು ವೇದಿಕಾ ಹೇಳಿದ್ದಾರೆ.

ರಿಮೇಕ್ ಸಿನಿಮಾ ಆಗಿರುವ ಗೌಡ್ರು ಹೋಟೇಲ್ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನಿರ್ದೇಶನ ಮಾಡುತ್ತಿರುವುದು ವೇದಿಕಾಗೆ ಸಂತಸ ತಂದಿದೆಯಂತೆ. ಕೇವಲ ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗಲು ನನಗೆ ಇಷ್ಟವಿಲ್ಲ. ಈ ಹಿಂದೆಯೂ ನಾನು ಉತ್ತಮ ಪಾತ್ರಗಳನ್ನೇ ಆಯ್ಕೆ ಮಾಡಿದ್ದೆ. ಗ್ಲಾಮರ್ ಪಾತ್ರ ಮಾಡುವುದು ಬಹಳ ಸುಲಭ, ಒಂದು ವೇಳೆ ನಾನು ಪದೇ ಪದೇ ಅದೇ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರೇ ಅದರಿಂದ ನನ್ನ ವೃತ್ತಿಗೆ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ವಿಭಿನ್ನ ಕಥೆಯುಳ್ಳ ಪಾತ್ರಗಳಲ್ಲಿ ನಾನು ನಟಿಸಬೇಕು ಎಂದು ವೇದಿಕಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್