ಮನೋಜ್ ಭಾಜಪೇಯಿ-ರಾಮ್ ಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನ ರಾಕ್ ಸ್ಟಾರ್: ಮನೋಜ್ ಬಾಜಪೇಯಿ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನೆಮಾ 'ಸತ್ಯ'ದಲ್ಲಿ ಜನಪ್ರಿಯ ಪಾತ್ರವೊಂದನ್ನು ಪೋಷಿಸಿದ್ದ ಖ್ಯಾತ ನಟ ಮನೋಜ್ ಭಾಜಪೇಯಿ, ನಿರ್ದೇಶಕನನ್ನು ಟ್ವಿಟ್ಟರ್ ನ ರಾಕ್ ಸ್ಟಾರ್ ಎಂದು ಬಣ್ಣಿಸಿದ್ದಾರೆ.

ಮುಂಬೈ: ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನೆಮಾ 'ಸತ್ಯ'ದಲ್ಲಿ ಜನಪ್ರಿಯ ಪಾತ್ರವೊಂದನ್ನು ಪೋಷಿಸಿದ್ದ ಖ್ಯಾತ ನಟ ಮನೋಜ್ ಭಾಜಪೇಯಿ, ನಿರ್ದೇಶಕನನ್ನು ಟ್ವಿಟ್ಟರ್ ನ ರಾಕ್ ಸ್ಟಾರ್ ಎಂದು ಬಣ್ಣಿಸಿದ್ದಾರೆ. 
"ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನ ರಾಕ್ ಸ್ಟಾರ್ ಮತ್ತು ಸೂಪರ್ ಸ್ಟಾರ್. ಅವರ ಟ್ವೀಟ್ ಗಳು ಯಾವತ್ತಿಗೂ ಚರ್ಚೆಗಳನ್ನು ಎತ್ತುತ್ತವೆ. ಅವರು ಭಯಭೀತಿಯಿಲ್ಲದ ವ್ಯಕ್ತಿ. ಅವರ ಅನಿಸಿಕೆಗಳನ್ನು ಹಂಚಿಕೊಳ್ಳುವ ಹಕ್ಕು ಅವರಿಗಿದೆ. ಅವರ ಜೊತೆಗೆ ಯಾವಾಗಲೂ ಒಪ್ಪಿಕೊಳ್ಳಬೇಕು ಎಂಬುದು ಮುಖ್ಯವಲ್ಲ" ಎಂದು ಮನೋಜ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
'ಸರ್ಕಾರ್ ೩' ಸಿನೆಮಾದಲ್ಲಿ ಮನೋಜ್ ಆರ್ ಜಿ ವಿ ಜೊತೆಗೆ ೧೫ ವರ್ಷಗಳ ನಂತರ ಕೆಲಸ ಮಾಡುತ್ತಿದ್ದಾರೆ. 
ವರ್ಮಾ ಜೊತೆಗೆ ಕೆಲಸ ಮಾಡುವ ಅನುಭವ ಹಂಚಿಕೊಂಡ ನಟ "ನಮ್ಮಿಬ್ಬರ ಮಧ್ಯೆ ಹಿಂದೆ ಹಲವು ಬಾರಿ ಭಿನ್ನಾಭಿಪ್ರಾಯಗಳಿದ್ದವು ಆದರೆ ಈಗ ಕಾಲ ಬದಲಾಗಿದೆ. ಇಬ್ಬರೂ ವ್ಯಕ್ತಿಗತವಾಗಿ ಬೆಳೆದಿದ್ದೇವೆ ಮತ್ತು ಹಲವು ವರ್ಷಗಳಿಂದ ಅವರ ಜೊತೆಗೆ ಕೆಲಸ ಮಾಡಲು ಹವಣಿಸುತ್ತಿದ್ದೆ. ಆದರೆ ಗಮನಾರ್ಹವಾದದ್ದು ಬಂದಿರಲಿಲ್ಲ. 
"ಆದರೆ ಈ ಬಾರಿ ಅವರು ಸಿನೆಮಾದ ಪಾತ್ರದ ಬಗ್ಗೆ ಹೇಳಿದಾಗ ಅದರ ಭಾಗವಾಗಲು ಕೂಡಲೇ ಒಪ್ಪಿಗೆ ಸೂಚಿಸಿದೆ. ನಟನಿಗೆ ಪಾತ್ರದ ಪರಿಚಯ ಮಾಡಿಕೊಟ್ಟು ಅದರೊಂದಿಗೆ ಉತ್ತಮ ರೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ನಟಿಸುವ ಸ್ವಾತಂತ್ರ್ಯ ನೀಡುವ ನಿರ್ದೇಶಕ ಆರ್ ಜಿ ವಿ" ಎಂದು ಹೇಳಿದ್ದಾರೆ. 
ಇದು ವಿಶೇಷ ಪಾತ್ರ ಎನ್ನುವ ಮನೋಜ್ "ಸಿನೆಮಾದಲ್ಲಿ ವಿಶೇಷವಾಗಿ ಮೂಡುವ ಪಾತ್ರ ಇದು. ಅವನು (ನನ್ನ ಪಾತ್ರ) ಬಹಳ ಪ್ರಾಮಾಣಿಕ ವ್ಯಕ್ತಿ ಮತ್ತು ಸರ್ಕಾರ್ ಹಾಗು ಅವನ ಕೆಲಸದ ಶೈಲಿಯ ವಿರುದ್ಧವಾಗಿರುತ್ತಾನೆ. ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಗೂಂಡಾಗಳನ್ನು ವಿರೋಧಿಸುವ ಪಾತ್ರ ನನ್ನದು" ಎನ್ನುತ್ತಾರೆ. 
ಈ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. "ಈ ಹಿಂದೆ ಅಮಿತಾಬ್ ಅವರೊಂದಿಗೆ ನಾಲ್ಕು ಸಿನೆಮಾಗಳಲ್ಲಿ ನಟಿಸಿದ್ದೇನೆ ಮತ್ತು ಅವರ ಜೊತೆಗೆ ಕೆಲಸ ಮಾಡುವುದು ಅದ್ಭುತ ಕ್ಷಣಗಳು. ಅವರು ಅತ್ಯದ್ಭುತ ವೃತ್ತಿಪರ ವ್ಯಕ್ತಿ. ಅವರು ಸಿನೆಮಾ ರಂಗದಲ್ಲಿ ೪೫ ವರ್ಷಗಳ ಕಾಲ ದುಡಿದಿದ್ದರೂ, ಯಾವುದೇ ದೃಶ್ಯವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಾನು ಅವರನ್ನು ಅತಿ ಹೆಚ್ಚು ಗೌರವಿಸುತ್ತೇನೆ ಮತ್ತು ಅವರು ಕೂಡ ನನ್ನ ಕೆಲಸವನ್ನು ಇಷ್ಟಪಡುತ್ತಾರೆ. ನಾವು ಭೇಟಿ ಆಗಿ ಚರ್ಚಿಸಿದಾಗಲೆಲ್ಲಾ ಸಿನೆಮಾಗಳ ಬಗ್ಗೆ ಮಾತನಾಡುತ್ತೇವೆ" ಎಂದಿದ್ದಾರೆ ಮನೋಜ್. 
ಬಿಗ್ ಬಿ ಮತ್ತು ಮನೋಜ್ ಅಲ್ಲದೆ 'ಸರ್ಕಾರ್ ೩'ರಲ್ಲಿ ಅಮಿತ್ ಸಾಧ್, ಯಾಮಿ ಗೌತಮ್, ರೋನಿತ್ ರಾಯ್ ಮಾತು ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ. ಈ ಸಿನೆಮಾ ಮೇ ೧೨ ರಂದು ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT