ಲಾರ್ಡ್ಸ್: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಯಾರಿಗೆ ತಾನೆ ಪರಿಚಯವಿಲ್ಲ ಹೇಳಿ..ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ ಮತ್ತು ಟಾಲಿವುಡ್ ನಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ಸಿನಿ ಅಭಿಮಾನಿಗಳ ರಂಜಿಸಿದ ನಟ..ಆದರೆ ಇಂತಹ ನಟನನ್ನು ಓರ್ವ ಕ್ರಿಕೆಟಿಗ ಯಾರು ಎಂದು ಕೇಳಿದಾಗ ಟ್ವಿಟರ್ ನಲ್ಲಿ ಹರಿದು ಬಂದ ಉತ್ತರ ಸರಮಾಲೆ ನಿಜಕ್ಕೂ ನಿಬ್ಬೆರಗಾಗಿಸುತ್ತದೆ.
ಹೌದು..ಪ್ರಸ್ತುತ ನಟ ಕಿಚ್ಚಾ ಸುದೀಪ್ ಅವರು ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಕ್ರಿಕೆಟ್ ಸರಣಿಯಾಡುತ್ತಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ `ಕಾರ್ಪೋರೇಟರ್ ಕ್ರಿಕೆಟ್ ಡೇ' ಟೂರ್ನಿಯಲ್ಲಿ ಸುದೀಪ್ ವಿಷನೇರ್ ತಂಡವನ್ನು ಮುನ್ನಡೆಸುತ್ತಿದ್ದು, ಟೂರ್ನಿ ಮಧ್ಯದಲ್ಲಿ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಓರ್ವ ಕ್ರಿಕೆಟಿಗನೊಂದಿಗಿನ ಫೋಟೋ ಅಪ್ಲೋಡ್ ಮಾಡಿದ್ದರು. ಅಲೆಕ್ಸ್ ಟ್ಯುಡೊರ್ #AlexTudor ಎಂಬ ಕ್ರಿಕೆಟಿಗನ ಕುರಿತು ಸುದೀಪ್ ಬಣ್ಣಿಸಿದ್ದರು. ಅಲೆಕ್ಸ್ ಓರ್ವ ಸಹ ಆಟಗಾರ ಮಾತ್ರವಲ್ಲ ಉತ್ತಮ ವ್ಯಕ್ತಿ ಎಂದು ಬಣ್ಣಿಸಿದ್ದರು.
ಆದರೆ ಸುದೀಪ್ ರನ್ನು ಓರ್ವ ಸಹ ಆಟಗಾರನಾಗಿ ಕಂಡಿದ್ದ ಅಲೆಕ್ಸ್ ಸುದೀಪ್ ಬಗ್ಗೆ ತಿಳಿಯಲು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅವರ ಫೋಟೋ ಹಾಕಿ ಪ್ರಶ್ನೆ ಕೇಳಿದ್ದರು. ನನ್ನ ಭಾರತೀಯ ಸ್ನೇಹಿತರಲ್ಲಿ ಈ (ಸುದೀಪ್) ವ್ಯಕ್ತಿ ಯಾರೆಂದು ಯಾರಿಗಾದರೂ ತಿಳಿದಿದೆಯೇ..ಇವರು ಬಾಲಿವುಡ್ ನಟರಂತೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ನೂರಾರು ಪ್ರತಿಕ್ರಿಯೆಗಳು ಬಂದಿದ್ದು, ಸುದೀಪ್ ಭಾರತೀಯ ಚಿತ್ರರಂಗ ಸೂಪರ್ ಸ್ಟಾರ್, ಅಭಿನಯ ಚಕ್ರವರ್ತಿ, ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಕಥೆಗಾರ, ಗಾಯಕ, ಕ್ರಿಕೆಟ್ ತಂಡದ ಫ್ರಾಂಚೈಸಿ ಮತ್ತು ಕ್ರಿಕೆಟಿಗ ಹೀಗಾಗಿ ನಾನಾ ಉತ್ತರ ಗಳನ್ನು ನೀಡಿದ್ದಾರೆ.
ಇನ್ನು ಕೆಲವು ಇವರು ದಕ್ಷಿಣ ಭಾರತದ ಖ್ಯಾತ ನಟರಾಗಿದ್ದು, ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು ಇವರನ್ನು ಇಷ್ಟಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಯಾರು ಎಂದು ಕೇಳಿದ ಪ್ರಶ್ನೆಗೆ ಬಂದ ಪ್ರತ್ಯುತ್ತರ ಸರಮಾಲೆ ಇಲ್ಲಿದ್ದು, ಬಹುಶಃ ಸುದೀಪ್ ಬಗ್ಗೆ ತಿಳಿಯದ ಒಂದಷ್ಟು ವಿಚಾರಗಳು ಅವರ ಅಭಿಮಾನಿಗಳಿಗೆ ಇಲ್ಲಿ ದೊರೆಯಬಹುದು ಎಂದೆನಿಸುತ್ತದೆ.
@alextudorcoach He is ......