ಸಿನಿಮಾ ಸುದ್ದಿ

6 ವರ್ಷಗಳ ನಂತರ ಮಲಯಾಳಂ ಚಿತ್ರದಲ್ಲಿ ಜಯಪ್ರದಾ ನಟನೆ

Shilpa D
ತಿರುವನಂತಪುರ: ಪ್ರಸಿದ್ಧ ಬಹುಭಾಷಾ ನಟಿ ಹಾಗೂ ರಾಜಕಾರಣಿ ಜಯಪ್ರದಾ ಆರು ವರ್ಷಗಳ ನಂತರ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸದ್ಯ ತಿರುವನಂತಪುರದಲ್ಲಿರುವ ಜಯಪ್ರದಾ ಎಂ,ಎ ನಿಶಾದ್ ಅವರ ನಿರ್ದೇಶನದ ಕಿನ್ನಾರು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ದೀರ್ಘಕಾಲದ ನಂತರ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿರುವು ನನಗೆ ಸಂತಸವಾಗಿದೆ ಎಂದು ಹೇಳಿದ್ದಾರೆ, ಚಿತ್ರದ ಕಥೆ ಅದ್ಭುತವಾಗಿದ್ದು, ನನಗೆ ಕಥೆ ತುಂಬಾ ಹಿಡಿಸಿತು. ರೈತರಿಗೆ ಹತ್ತಿರವಾದ ಕಥೆಯಾಗಿರುವುದರಿಂದ ಸಾಮಾಜಿಕ ಸಂದೇಶವನ್ನೊಳಗೊಂಡಿದೆ, ಕಥೆ ತುಂಬಾ ಅರ್ಥಗರ್ಭಿತವಾಗಿದೆ ಎಂದು ತಿಳಿಸಿದ್ದಾರೆ.
2011 ರಲ್ಲಿ ಮಲಯಾಳಂನ  ಪ್ರಣಯಂ ಜಯಪ್ರದಾ ಅಭಿನಯದ ಯಶಸ್ವಿ ಚಿತ್ರವಾಗಿತ್ತು. ಮೋಹನ್ ಲಾಲ್ ಮತ್ತು ಅನುಪಮ್ ಖೇರ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದರು, ಬ್ಲೆಸ್ಸಿ ಸಿನಿಮಾ ನಿರ್ದೇಶಿಸಿದ್ದರು. 
SCROLL FOR NEXT