ಸಿನಿಮಾ ಸುದ್ದಿ

ಕಂಗನಾ ಅವರ 'ಸಿಮ್ರಾನ್' ಟೀಸರ್ ಬಿಡುಗಡೆ ಮಾಡಿದ ಹನ್ಸಲ್ ಮೆಹ್ತಾ

Guruprasad Narayana
ಮುಂಬೈ: 'ರಂಗೂನ್' ಸಿನೆಮಾದ ಸೋಲಿನ ನಂತರ ರಾಷ್ಟಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ ಮತ್ತೆ ಹಿಂದಿರುಗಿದ್ದಾರೆ. 'ಸಿಮ್ರಾನ್' ಸಿನೆಮಾದ ಟೀಸರ್ ಬಿಡುಗಡೆಯಾದ ದಿನವೇ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ನಿರ್ದೇಶಕ ಹನ್ಸಲ್ ಮೆಹ್ತಾ ಇದನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. 
ಒಂದು ನಿಮಿಷದ ಈ ಟೀಸರ್ ನಲ್ಲಿ ಗುಜರಾತಿ ಎನ್ ಆರ್ ಐ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ ಅವರ ಹುಡುಗಾಟದ ಹಲವು ಅವತಾರಗಳನ್ನು ತೆರೆದಿಡಲಾಗಿದೆ. 
'ಕ್ವೀನ್' ಮತ್ತು 'ತನು ವೆಡ್ಸ್ ಮನು' ಸಿನೆಮಾದಲ್ಲಿ ನಟಿಸಿದ್ದ ಹುಡುಗಾಟದ, ಚಲನಶೀಲ ವ್ಯಕ್ತಿತ್ವದ ಪಾತ್ರದಂತೆಯೇ ಇದು ಕಂಡು ಬಂದಿದ್ದು, ಅಭಿಮಾನಿಗಳನ್ನು ತಣಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. 
ಇದೆ ಮೊದಲ ಬಾರಿಗೆ ಮೆಹ್ತಾ ಸಿನೆಮಾದಲ್ಲಿ ಕಂಗನಾ ನಟಿಸುತ್ತಿರುವುದು. 'ಸಿಮ್ರಾನ್' ಸೆಪ್ಟೆಂಬರ್ ೧೫ ರಂದು ಬಿಡುಗಡೆಯಾಗಲಿದೆ. 
ಈ ಸಿನೆಮಾ ಟೀಸರ್ ಇಲ್ಲಿ ವೀಕ್ಷಿಸಿ. 
SCROLL FOR NEXT