ಮುಂಬಯಿ : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ಗೆ ಅಭಿಮಾನಿಗಳ ಎದುರೆ ಆಲಿಬಾಗ್ನ ಎಂಎಲ್ಸಿ ಯೊಬ್ಬರು ಸಿಟ್ಟು ಮಾಡಿಕೊಂಡು ಕೂಗಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ನವೆಂಬರ್ 2 ರಂದು ಘಟನೆ ನಡೆದಿದ್ದು, ವಿಡಿಯೋ ತಡವಾಗಿ ವೈರಲ್ ಆಗಿದೆ. ಹುಟ್ಟು ಹಬ್ಬ ಆಚರಣೆಗೆಂದು ಅಲಿಬಾಗ್ ಗೆ ತೆರಳಿ ವಿಹಾರ ನೌಕೆಯಲ್ಲಿ ಶಾರುಖ್ ಖಾನ್ ವಿಹರಿಸುತ್ತಿದ್ದರು. ಇದೇ ವೇಳೆ ಎಂಎಲ್ಸಿ ಜಯಂತ್ ಪಾಟೀಲ್ ಅವರು ರಾಯ್ಘಡ್ನ ಕೊಲಾಬಾದಲ್ಲಿರುವ ನಿವಾಸಕ್ಕೆ ತೆರಳಲು ಸ್ಥಳಕ್ಕಾಗಮಿಸಿದ್ದಾರೆ.
ಶಾರುಕ್ ಬಂದಿದ್ದಾರೆ ಅನ್ನೋ ಸುದ್ದಿ ಗೊತ್ತಾಗುತ್ತಿದ್ದಂತೆ ಶಾರೂಕ್ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಾರುಖ್ರಿಂದಾಗಿ ಪಾಟೀಲ್ ಪ್ರಯಾಣಿಸಬೇಕಾಗಿದ್ದ ಬೋಟ್ ಬರುವುದು ವಿಳಂಬವಾಯಿತು. ಅಭಿಮಾನಿಗಳ ಸಂದಣಿಯಲ್ಲಿ ಪಾಟೀಲ್ ಪರದಾಡಬೇಕಾಯಿತು.
ನೌಕೆ ಏರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಪಾಟೀಲ್ ಶಾರುಖ್ ವಿರುದ್ಧ ಸಿಡಿಮಿಡಿಗೊಂಡ ಪಾಟೀಲ್ 'ನೀನು ಸೂಪರ್ ಸ್ಟಾರ್ ಇರಬಹುದು ಆದ್ರೆ ಆಲಿಬಾಗ್ ನಿಂದಲ್ಲ' ಎಂದಿದ್ದಾರೆ.
ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗದ ಶಾರುಖ್ ಹೊರಬರುತ್ತಿದ್ದಂತೆ ನೂರಾರು ಅಭಿಮಾನಿಗಳು ಸಂಭ್ರಮದಿಂದ ಜೈಕಾರ ಹಾಕಿದ್ದಾರೆ. ಅಭಿಮಾನಿಗಳು ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.