ಸಿನಿಮಾ ಸುದ್ದಿ

ಸಂಯುಕ್ತ ಹೊರನಾಡು ಎರಡನೇ ತೆಲುಗು ಚಿತ್ರಕ್ಕೆ ರವಿಕಾಂತ್ ಪೆರೆಪು ನಿರ್ದೇಶನ

Sumana Upadhyaya

ಬೆಂಗಳೂರು: ತೆಲುಗು ನಟ ಅಲ್ಲು ಶಿರಿಸ್ ಜೊತೆಗಿನ ಫೋಟೋ ಮೂಲಕ ಕನ್ನಡದ ನಟಿ ಸಂಯುಕ್ತಾ ಹೊರನಾಡು ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಫೋಟೋ ವೈರಲ್ ಆಗಿದ್ದು ಇವರಿಬ್ಬರ ಚಿತ್ರ ಬಿಡುಗಡೆಯಾಗುತ್ತಿದೆಯೇ ಎಂದು ಚಿತ್ರಪ್ರೇಮಿಗಳಿಗೆ ಕುತೂಹಲವುಂಟಾಯಿತು. ಈ ಬಗ್ಗೆ ಕೇಳಿದಾಗ ಸಂಯುಕ್ತಾ ಅವರಿಂದ ಇಲ್ಲ ಎಂಬ ಉತ್ತರ ಬಂತು.

ತೆಲುಗಿನಲ್ಲಿ ಸಂಯುಕ್ತ ಅವರ ಮೊದಲ ಚಿತ್ರ ಉಲ್ಲವಚರು ಬಿರಿಯಾನಿಯ ನಂತರ  ಇದೀಗ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಇಂದು ಆರಂಭವಾಗಲಿದೆ.

ರವಿಕಾಂತ್ ಪೆರೆಪು ನಿರ್ದೇಶನದ ಅಪರಾಧ ಹಿನ್ನೆಲೆಯ ಹಾಸ್ಯ ಚಿತ್ರದಲ್ಲಿ ಸಂಯುಕ್ತಾ ನಟಿಸುತ್ತಿದ್ದಾರೆ. ಇದು ರಾಣಾ ದಗ್ಗುಬಾಟಿ ಪ್ರೊಡಕ್ಷನ್ ಹೌಸ್ ನಲ್ಲಿ ತಯಾರಾಗುತ್ತಿದೆ. ಸಂಯುಕ್ತಾ ಕಡೆಯಿಂದ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿಲ್ಲ.

SCROLL FOR NEXT