ದುರ್ಯೋಧನನ ಪಾತ್ರದಲ್ಲಿ ದರ್ಶನ್
ಬೆಂಗಳೂರು: ಮುನಿರತ್ನ ನಿರ್ಮಿಸಿ, ನಾಗಣ್ಣ ನಿರ್ದೇಶಿಸುತ್ತಿರುವ ದರ್ಶನ್ 50ನೇ ಚಿತ್ರ ಕುರುಕ್ಷೇತ್ರ ಅಡ್ಡದಿಂದ ಕೆಲ ಫೋಟೋಗಳು ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
'ಕುರುಕ್ಷೇತ್ರ' ಶೂಟಿಂಗ್ ಸೆಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿ ಪವಿತ್ರ ಗೌಡ ಇದ್ದ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿತ್ತು. ಈಗ ಇದೇ ಫೋಟೋಗಳ ಬಗ್ಗೆ ನಿರ್ಮಾಪಕ ಮುನಿರತ್ನ ಗರಂ ಆಗ್ಬಿಟ್ಟಿದ್ದಾರೆ.
'ಮುನಿರತ್ನ ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಇದೇ ಸ್ಪಾಟ್ ನಲ್ಲಿ ನಟಿ ಪವಿತ್ರ ಗೌಡಕಾಣಿಸಿಕೊಂಡಿದ್ದರು. ಆ ಫೋಟೋಗಳು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ನಿನ್ನೆ ಲೀಕ್ ಆಗಿತ್ತು.
'ಕುರುಕ್ಷೇತ್ರ' ಚಿತ್ರದ ಸೆಟ್ ಒಳಗೆ ಅಷ್ಟು ಸುಲಭವಾಗಿ ಯಾರನ್ನೂ ಬಿಡುತ್ತಿಲ್ಲ. ಬಿಟ್ಟರೂ, ಫೋಟೋ ತೆಗೆಯುವ ಪರ್ಮಿಷನ್ ಯಾರಿಗೂ ಇಲ್ಲ. ಹೀಗಿದ್ದರೂ, ಫೋಟೋಗಳನ್ನ ತೆಗೆದು ಅದನ್ನ ವೈರಲ್ ಮಾಡಿರುವ ವಿಚಾರಕ್ಕೆ ನಿರ್ಮಾಪಕ ಮುನಿರತ್ನ ಕೋಪಗೊಂಡಿದ್ದಾರೆ.
ನಮ್ಮ ಸೆಟ್ ನಲ್ಲಿ ನನ್ನ ಪರ್ಮಿಷನ್ ಇಲ್ಲದೆ ಫೋಟೋ ತೆಗೆದ ವಿಚಾರವಾಗಿ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ. ಅನುಮತಿ ಇಲ್ಲದೆ ಫೋಟೋ ತೆಗೆದವರು ಯಾರು ಅನ್ನೋದು ಗೊತ್ತಿಲ್ಲ. ನಮ್ಮ ಚಿತ್ರದ ಗೌಪ್ಯತೆ ಹೊರ ಹಾಕಿದ್ದಕ್ಕೆ ಬೇಸರವಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.