ದರ್ಶನ್ ಅವರ ಮುಂಬರುವ ಚಿತ್ರ ಯಜಮಾನದಲ್ಲಿ ಒಬ್ಬ ನಾಯಕಿ ತನ್ಯಾ ಹೊಪೆ ಇತ್ತೀಚೆಗೆ ಶೂಟಿಂಗ್ ಸಮಯದಲ್ಲಿ ದರ್ಶನ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಈ ಸೆಲ್ಫಿ ಚಿತ್ರದ ಒಂದು ದೃಶ್ಯದ ಸಲುವಾಗಿ ತೆಗೆದದ್ದು ಎನ್ನುತ್ತಾರೆ ತನ್ಯಾ.
ಚಿತ್ರದ ಎರಡನೇ ಭಾಗದ ಶೂಟಿಂಗ್ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದು ತನ್ನ ಭಾಗದ ಚಿತ್ರೀಕರಣ ಮುಗಿಸಿ ತನ್ಯಾ ಬೆಂಗಳೂರಿಗೆ ಮರಳಿದ್ದಾರೆ. ಆರಂಭದಲ್ಲಿ ನನಗೆ ಚಿತ್ರತಂಡ ಹೊಸದಾಗಿತ್ತು. ಕೆಲ ದಿನಗಳು ಕಳೆದ ನಂತರ ಎಲ್ಲರ ಪರಿಚಯವಾಯಿತು ಎನ್ನುತ್ತಾರೆ.
ಚಿತ್ರತಂಡದಲ್ಲಿದ್ದ ಪ್ರತಿಯೊಬ್ಬರೂ ನನಗೆ ಪ್ರೋತ್ಸಾಹ, ಸಹಕಾರ ನೀಡಿದ್ದಾರೆ. ಮೊದಲ ಶೆಡ್ಯೂಲ್ ನಲ್ಲಿ ರಶ್ಮಿಕಾ ಮಂದಣ್ಣರನ್ನು ಭೇಟಿಯಾದೆ, ಅವರು ತುಂಬಾ ಉತ್ಸಾಹ, ಲವಲವಿಕೆಯ ಹುಡುಗಿ. ಇನ್ನು ದರ್ಶನ್ ನನಗೆ ಕ್ಯಾಮರಾದ ಮಗ್ಗುಲುಗಳ ಬಗ್ಗೆ ಹೇಳಿಕೊಡುತ್ತಿದ್ದರು. ನನ್ನ ನಟನೆ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ಕೂಡ ನೀಡುತ್ತಿದ್ದರು. ದರ್ಶನ್ ನಟನೆಯಲ್ಲಿ ನನಗೆ ತುಂಬಾ ಸಹಾಯ ಮಾಡಿದ್ದಾರೆ, ಅದು ನನಗೆ ಖುಷಿ ನೀಡುತ್ತಿತ್ತು ಎನ್ನುತ್ತಾರೆ.
ನಿರ್ದೇಶಕ ಪೊನ್ ಕುಮಾರ್, ನಿರ್ಮಾಪಕಿ ಶೈಲಜಾ ನಾಗ್ ನನಗೆ ಉತ್ತೇಜನ ನೀಡುತ್ತಿದ್ದರು, ಇಡೀ ಚಿತ್ರತಂಡ ನನ್ನನ್ನು ಚೆನ್ನಾಗಿ ನಡೆಸಿಕೊಂಡಿದೆ ಎನ್ನುವ ತನ್ಯಾಗೆ ಇದು ಕನ್ನಡದಲ್ಲಿ ಎರಡನೆ ಚಿತ್ರ, ಹೋಂ ಮಿನಿಸ್ಟರ್ ನಲ್ಲಿ ಈಗಾಗಲೇ ನಟಿಸಿರುವ ಅವರು ಚಂದನವನ ಖುಷಿ ನೀಡಿದೆಯಂತೆ.