ಸಿನಿಮಾ ಸುದ್ದಿ

ಚಿತ್ರ ಅಟ್ಟರ್ ಫ್ಲಾಪ್ ಆಯ್ತು, ಸಂಕಷ್ಟಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದ ನಟ ಈಗ ಪೊಲೀಸರ ಅತಿಥಿ!

ಟಾಲಿವುಡ್ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಎಂಬಾತನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ...

ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಎಂಬಾತನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. 
ತೆಲುಗಿನ ನಿವಿರು ಚಿತ್ರವನ್ನು ಮಹೇಶ್ ನಟಿಸಿ ನಿರ್ಮಿಸಿದ್ದರು. ಆದರೆ ಚಿತರ್ ಫ್ಲಾಪ್ ಆಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹೇಶ್ ಕಳ್ಳತನಕ್ಕೆ ಇಳಿದಿದ್ದರು ಎಂದು ಹೇಳಲಾಗಿದೆ. ಇನ್ನು ಬಂಧಿತರಿಂದ 15 ಲಕ್ಷ ಮೌಲ್ಯದ 50 ತೊಲ ಬಂಗಾರ, 30 ತೊಲ ಬೆಳ್ಳಿ ಹಾಗೂ 3 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. 
ಮಹೇಶ್ ಹಗಲಿನಲ್ಲಿ ಕೇಬಲ್ ಆಪರೇಟರ್ ಸೋಗಿನಲ್ಲಿ ಮನೆಗಳನ್ನು ಸುತ್ತಾಡುತ್ತಿದ್ದ, ಇನ್ನು ರಾತ್ರಿ ಆಗುತ್ತಿದ್ದಂತೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. 
ಇನ್ನು ವಿಕ್ಕಿ ಇದಕ್ಕೂ ಮುನ್ನ ಒಂದು ಬಾರಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಜುಬ್ಲಿ ಹಿಲ್ಸ್ ಪೊಲೀಸರು ಈತನನ್ನು ಬಂಧಿಸಿದ್ದರು. ಜೈಲಿನಿಂದ ಹೊರ ಬಂದ ಮೇಲೂ ಈತ ಕಳ್ಳತನ ಬಿಟ್ಟಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

SCROLL FOR NEXT