ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಭಾಗ-1 ಸಿನಿಮಾದಲ್ಲಿ ಯಶ್ ನಟಿಸಿದ್ದಾರೆ, ಯಶ್ ಚಿಕ್ಕವಯಸ್ಸಿನ ಪಾತ್ರದಲ್ಲಿ ಅಭಿನಯಿಸಿರುವ ಅನ್ಮೋಲ್ ವಿಜಯ್ ಭಟ್ಕಳ್ ನಟಿಸಿದ್ದಾರೆ.
14 ವರ್ಷದ ಬಾಲಕನ ಪಾತ್ರದಲ್ಲಿ ನಟಿಸಿರುವ ಈತ 9ನೇ ತರಗತಿ ವಿದ್ಯಾರ್ಥಿ, ಕಳೆದ 9 ವರ್ಷಗಳಿಂದ ಈತ ಡ್ಯಾನ್ಸ್ ಕಲಿಯುತ್ತಿದ್ದು, ಒಂದು ತಿಂಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾನೆ, ಟ್ರೈಲರ್ ನಲ್ಲಿ ನನ್ನ ನಟನೆ ನೋಡಿ ನನಗೆ ಮೆಚ್ಚುಗೆಯಾಗಿದೆ, ಅದಕ್ಕಾಗಿ ನನಗೆ ಹೆಮ್ಮೆಯಿದೆ, ನನ್ನ ಚಾಮರಾಜ ಮೇಸ್ಚ್ರು ಈ ಪಾತ್ರಕ್ಕಾಗಿ ನನ್ನ ಹೆಸರು ಶಿಫಾರಸ್ಸು ಮಾಡಿದ್ದರು ಎಂದು ವಿಜಯ್ ಭಟ್ಕಳ್ ತಿಳಿಸಿದ್ದಾನೆ.
ನಿರ್ದೇಶಕರ ಆದೇಶ ಇರುವುದರಿಂದ ಇಲ್ಲಿ ನಾನು ಯಾವುದೇ ಹೆಚ್ಚಿನ ವಿಷಯವನ್ನು ಹಂಚಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾನೆ. ಅನಂತ್ ನಾಗ್, ಬಿ.ಸುರೇಶ್, ಅಚ್ಯುತ್ ಕುಮಾರ್, ವಿಶಿಷ್ಟ ಸಿಂಹ ಮತ್ತು ಮಾಳವಿಕಾ ನಟಿಸಿದ್ದಾರೆ.