ಶ್ರೀದೇವಿ 
ಸಿನಿಮಾ ಸುದ್ದಿ

ದೇವರನ್ನು ಹೆಚ್ಚಾಗಿ ದ್ವೇಷಿಸುತ್ತೇನೆ: ಶ್ರೀದೇವಿ ನಿಧನಕ್ಕೆ ಆರ್ ಜಿ ವಿ ಶಾಕ್

ಶ್ರೀದೇವಿ ಅವರ ಅಕಾಲಿಕ ಮರಣಕ್ಕೆ ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂತಾಪ ಸೂಚಿಸಿದ್ದಾರೆ.ನಟಿ ಶ್ರೀದೇವಿ ಅವರ ಸಾವಿಗೆ ನಾನು ದೇವರನ್ನು ಮತ್ತಷ್ಟು ದ್ವೇಷಿಸುತ್ತೇನೆ...

ಮುಂಬಯಿ: ಕಳೆದ ರಾತ್ರಿ ದುಬೈನಲ್ಲಿ ಭಾರತೀಯ ಚಿತ್ರರಂಗದ ಹಿರಿಯತಾರೆ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಶಕಗಳ ಕಾಲ ಬಾಲಿವುಡ್ ಸೂಪರ್ ಸ್ಟಾರ್ ಆಗಿದ್ದ ಶ್ರೀದೇವಿ ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 
ಪತಿ ಬೋನಿ ಕಪೂರ್ ಮತ್ತು ತಮ್ಮ ಕಿರಿಯ ಪುತ್ರಿ ಖುಷಿಯೊಂದಿಗೆ ತಮ್ಮ ಸಂಬಂಧಿ ಮೊಹಿತ್ ಮಾರ್ವ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. 
ಶ್ರೀದೇವಿ ಅವರ ಅಕಾಲಿಕ ಮರಣಕ್ಕೆ ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂತಾಪ ಸೂಚಿಸಿದ್ದಾರೆ.ನಟಿ ಶ್ರೀದೇವಿ ಅವರ ಸಾವಿಗೆ ನಾನು ದೇವರನ್ನು ಮತ್ತಷ್ಟು ದ್ವೇಷಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇಷ್ಟು ಬೇಗ ಸತ್ತಿದ್ದಕ್ಕೆ ಶ್ರೀದೇವಿಯನ್ನು ಕೂಡ ನಾನು ದ್ವೇಷಿಸುತ್ತೇನೆ, ಆಕೆ ಮತ್ತಷ್ಟು ದಿನ ಬದುಕು ಬೇಕಿತ್ತು ಎಂದು ಬರೆದಿದ್ದಾರೆ.
ಪ್ರತಿದಿನ ನಾನು ಕನಸು ಕಾಣುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ, ಹಾಗೂ ಪ್ರತಿ ಬಾರಿ ಎದ್ದಾಗಲೂ ನಾನು ನನ್ನ ಸೆಲ್ ಫೋನ್ ಚೆಕ್ ಮಾಡುತ್ತಿರುತ್ತೇನೆ, ನಿನ್ನೆ ರಾತ್ರಿ ಕೂಡ ಹೀಗೆ ಸೆಲ್ ಫೋನ್ ಚೆಕ್ ಮಾಡುವಾಗ ಶ್ರೀದೇವಿ ಇಸ್ ನೋ ಮೋರ್ ಎಂಬ ಸಂದೇಶ ಬಂದಿತ್ತು, ಯಾರೋ ತಮಾಷೆಗಾಗಿ ಹೀಗೆ ಮಾಡಿದ್ದಾರೆ ಎಂದು ಭಾವಿಸಿ ಮತ್ತೆ ನಿದ್ದೆ ಮಾಡಲು ಹೋದೆ, 1ಗಂಟೆಯ ನಂತರ ಮತ್ತೆ ಸೆಲ್ ಫೋನ್ ಚೆಕ್ ಮಾಡಿದಾಗ ಸುಮಾರು 50 ಮೆಸೇಜ್ ಗಳು ಬಂದಿದ್ದವು, ಅವುಗಳೆಲೆಲ್ಲಾ ಶ್ರೀದೇವಿ ಅವರ ಬಗ್ಗೆ ಮಾಹಿತಿ ಇತ್ತು.
ನಾನು ವಿಜಯವಾಡದಲ್ಲಿ ಎಂಜಿನೀಯರಿಂಗ್ ಓದವಾಗ ಶ್ರೀದೇವಿ ಅವರ ಪದರೆಲ್ಲಾ ವಯಸ್ಸು ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾದಲ್ಲಿ ಆಕೆಯ ಸೌಂದರ್ಯ ನೋಡಿ ನಾನು ಅವಕ್ಕಾದೆ, ಅಕೆ ದೇವರ ಅದ್ಭುತ ಸೃಷ್ಟಿ,  ತುಂಬಾ ವಿಶೇಷವಾದ ಮೂಡ್ ನಲ್ಲಿರುವಾಗ ದೇವರು ಆಕೆಯನ್ನು ಸೃಷ್ಟಿಸಿದ್ದಾನೆ, ಆಕೆಯ ಸಾವನ್ನು ನಾನು ಇನ್ನೂ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಕ್ಷಣಂ ಕ್ಷಣಂ ಸಿನಿಮಾದಲ್ಲಿ ಶ್ರೀದೇವಿ ನಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT