ಹರಿಪ್ರಿಯಾ 
ಸಿನಿಮಾ ಸುದ್ದಿ

ನನ್ನ ಪ್ರತಿಭೆ ಗುರುತಿಸಿ ನಿರ್ದೇಶಕರು ಪಾತ್ರ ನೀಡಿದರೆ ಉತ್ತೇಜನ ಸಿಗುತ್ತದೆ: ಹರಿಪ್ರಿಯಾ

ಬಹು ತಾರಾಗಣ ಚಿತ್ರಗಳಲ್ಲಿ ನಟಿಸಲು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುವ ಬಹುಭಾಷಾ ನಟಿ ಹರಿಪ್ರಿಯಾ ....

ಬಹು ತಾರಾಗಣ ಚಿತ್ರಗಳಲ್ಲಿ ನಟಿಸಲು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುವ ಬಹುಭಾಷಾ ನಟಿ ಹರಿಪ್ರಿಯಾ ಪ್ರತಿ ಚಿತ್ರಗಳಲ್ಲಿ ತಮ್ಮ ನಟನೆ ಮೂಲಕ ಗುರುತಿಸಿಕೊಂಡಿದ್ದಾರೆ. 
]
ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಅವರ ಚಿತ್ರ ಜೈಸಿಂಹದಲ್ಲಿ ಬಹುತಾರಾಗಣವಿದೆ. ಈ ಬಗ್ಗೆ ಇತ್ತೀಚೆಗೆ ಅನಂತಪುರದಲ್ಲಿ ಸಿನಿಮಾ ಪ್ರಚಾರಕ್ಕಾಗಿ ಹೋಗಿದ್ದ ಹರಿಪ್ರಿಯಾ ಮಾತನಾಡಿ, ಚಿತ್ರದಲ್ಲಿ ಮಂಗ ಪಾತ್ರವನ್ನು ನಿರ್ವಹಿಸಿದ್ದಕ್ಕೆ ಸಂತೋಷವನ್ನು ಹಂಚಿಕೊಂಡರು. ತೆಲುಗಿನ ಖ್ಯಾತ ನಟ ಬಾಲಕೃಷ್ಣ ನಟಿಸಿದ್ದಾರೆ. 
ಹರಿಪ್ರಿಯಾ ಅವರ ಮುಂದಿನ ಚಿತ್ರ ಕನ್ನಡದಲ್ಲಿ ದುನಿಯಾ ವಿಜಯ್ ಜೊತೆ ಕನಕ ಚಿತ್ರ. ಆರ್.ಚಂದ್ರು ನಿರ್ದೇಶನದ ಕನಕ ಚಿತ್ರದಲ್ಲಿ ಮಾನ್ವಿತಾ ಹರೀಶ್ ಕೂಡ ಅಭಿನಯಿಸಿದ್ದಾರೆ. 
ತಡವಾಗಿ ನಾನು ಇತ್ತೀಚೆಗೆ ಮತ್ತೆ ಕೆಲ ಚಿತ್ರಗಳನ್ನು ಒಪ್ಪಿಕೊಳ್ಳಲು ಕಾರಣ ಚಿತ್ರಕಥೆ. ಅದರಲ್ಲಿನ ಪಾತ್ರಗಳು ನನಗೆ ಇಷ್ಟವಾಗುತ್ತಿವೆ. 
ಕನಕ ಚಿತ್ರದ ಶೂಟಿಂಗ್ ಅರ್ಧ ಮುಗಿದಾಗ ಅದರ ನಿರ್ದೇಶಕರು ನನ್ನನ್ನು ಸಂಪರ್ಕಿಸಿದರು. ಈ ಪಾತ್ರಕ್ಕೆ ನೀವು ಹೊಂದಿಕೆಯಾಗುತ್ತೀರಿ ಎಂದಾಗ ನಾನು ಕಥೆ ಕೇಳಿ ಒಪ್ಪಿಕೊಂಡೆ ಎನ್ನುತ್ತಾರೆ ಹರಿಪ್ರಿಯಾ.
ಮುಖ್ಯಮಂತ್ರಿ ಚಿತ್ರದಲ್ಲಿ ಒಟ್ಟಿಗೆ ದುನಿಯಾ ವಿಜಯ್ ಮತ್ತು ಹರಿಪ್ರಿಯಾ ನಟಿಸಿದ್ದರೂ ಕೂಡ ಅದು ಬಿಡುಗಡೆಯಾಗಿರಲಿಲ್ಲ. ಇದೀಗ ಇವರಿಬ್ಬರು ಜೋಡಿಯ ಕನಕ ಚಿತ್ರ ತೆರೆಗೆ ಬರುತ್ತಿದೆ. ಹಳ್ಳಿ ಹುಡುಗಿಯಾಗಿರದೆ ಕನಕ ಚಿತ್ರದಲ್ಲಿ ಸಂಪಿಗೆ ಪಾತ್ರ ಹೆಚ್ಚು ಶೇಡ್ ಗಳನ್ನು ಒಳಗೊಂಡಿದೆ. ಬಾಲ್ಯ ಜೀವನದ ಪ್ರೀತಿಯ ಬಗ್ಗೆ ನಿರ್ದೇಶಕರು ತೋರಿಸಿದ್ದಾರೆ ಎನ್ನುತ್ತಾರೆ ಹರಿಪ್ರಿಯಾ.
ಕನಕ ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ಮತ್ತು ಛಾಯಾಗ್ರಹಣ ಸತ್ಯ ಹೆಗ್ಡೆ ಒದಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel