ಸಿನಿಮಾ ಸುದ್ದಿ

ರಾಜು ಕನ್ನಡ ಮೀಡಿಯಂನಲ್ಲಿ ಜೀವನ ಪಾಠಗಳನ್ನು ಹಂಚಿಕೊಂಡ ನಟ ಸುದೀಪ್

Sumana Upadhyaya
ರಾಜು ಕನ್ನಡ ಮೀಡಿಯಂ ಸಿನಿಮಾ ಬಿಡುಗಡೆಯಾಗಿ ಕೆಲ ದಿನಗಳು ಕಳೆದಿವೆ. ಚಿತ್ರದ ಬಗ್ಗೆ ಅಲ್ಲಲ್ಲಿ ಸುದ್ದಿಗಳು ಕೇಳಿಬರುತ್ತಲೇ ಇವೆ. ಸುರೇಶ್ ನಿರ್ಮಾಣದ ಚಿತ್ರದ ನಾಯಕನಾಗಿ ಗುರುನಂದನ್ ಅಭಿನಯಿಸಿದ್ದಾರೆ.
ನಟ ಸುದೀಪ್ ಚಿತ್ರದಲ್ಲಿದ್ದಾರೆ ಎಂದು ಅನೇಕರು ಸಿನಿಮಾ ನೋಡಲು ಹೋಗುತ್ತಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಸುದೀಪ್, ನಮ್ಮ ವೃತ್ತಿಜೀವನದಲ್ಲಿ ಹೀರೋ ಆಗಿ ಸಿನಿಮಾ ಮಾಡುತ್ತೇವೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಮ್ಮನ್ನು ಕರೆದಾಗ ಆ ಪಾತ್ರಕ್ಕೆ ನಾವು ಏಕೆ ಅಗತ್ಯ ಎಂಬುದಕ್ಕೆ ಕೆಲವು ನಿರ್ದಿಷ್ಟ ಕಾರಣಗಳಿರುತ್ತವೆ. ನಿರ್ದೇಶಕರು ಕೆಲವು ಯೋಚನೆಗಳನ್ನು ಮಾಡಿರುತ್ತಾರೆ.
ಸಾಮಾನ್ಯವಾಗಿ ಹೀರೋಗೆ ಸಮನಾಗಿ ಅತಿಥಿ ಪಾತ್ರಕ್ಕೆ ಒತ್ತು ನೀಡಲು ನೋಡುತ್ತಾರೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕ ನರೇಶ್ ಆ ರೀತಿ ಮಾಡಿಲ್ಲ. ಸರಳವಾಗಿ ಇಲ್ಲಿ ನನ್ನ ಪಾತ್ರವನ್ನು ಚಿತ್ರಿಸಲಾಗಿದೆ. ಜೀವನದ ಬಗ್ಗೆ ಇರುವ ಸರಳತೆ ಮತ್ತು ವಾಸ್ತವ ದೃಷ್ಟಿಕೋನ ಮತ್ತು ನಾವು ಅರ್ಥ ಮಾಡಿಕೊಳ್ಳುವ ರೀತಿ ಜನರಿಗೆ ಹತ್ತಿರವಾಗುತ್ತದೆ ಎನ್ನುತ್ತಾರೆ.
ಈ ಚಿತ್ರದ ಪಾತ್ರವನ್ನು ನೋಡಿ ಸುದೀಪ್ ಸಹಿ ಹಾಕಿರಲಿಲ್ಲವಂತೆ. ಚಿತ್ರತಂಡದ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಉತ್ಸಾಹವನ್ನು ನೋಡಿ ಸಹಿ ಮಾಡಿದರಂತೆ. ಚಿತ್ರದ ಟ್ರೇಲರ್ ನೋಡಿದರೆ ಅದರ ಗುಣಮಟ್ಟ ಗೊತ್ತಾಗುತ್ತದೆ. ಕಣ್ಣಿಗೆ ಬಹಳ ಖುಷಿ ಕೊಡುತ್ತಿದ್ದು ಚಿತ್ರತಂಡಕ್ಕೆ ನನಗೆ ಈ ಪಾತ್ರ ನೀಡಿದ್ದಕ್ಕೆ ಅಭಿನಂದನೆ ಹೇಳುತ್ತೇನೆ ಎನ್ನುತ್ತಾರೆ ಸುದೀಪ್.
SCROLL FOR NEXT