'ಪಾಪ ಪಾಂಡು' ವೇಷಧಾರಿಯ ಜೊತೆ ಜನರು ಫೋಟೋ ತೆಗೆಸಿಕೊಂಡರು. 
ಸಿನಿಮಾ ಸುದ್ದಿ

ಜನ ಮನ ಸೆಳೆದ 'ಪಾಪ ಪಾಂಡು' ವಿನೂತನ ಪ್ರಮೋಷನ್!

ಮುಖವಾಡ ಇಟ್ಟುಕೊಂಡ, ಬೆನ್ನಲ್ಲಿ 'ಪಾಪ ಪಾಂಡು' ಬ್ಯಾನರ್ ಹೊತ್ತುಕೊಂಡ ಆ ವೇಷಧಾರಿಗಳು ಜನಜಂಗುಳಿಯ ಕಣ್ಣಿನ ಕುತೂಹಲವಾಗಿದ್ದರು.

ಮುಖವಾಡ ಇಟ್ಟುಕೊಂಡ, ಬೆನ್ನಲ್ಲಿ 'ಪಾಪ ಪಾಂಡು' ಬ್ಯಾನರ್ ಹೊತ್ತುಕೊಂಡ ಆ ವೇಷಧಾರಿಗಳು ಜನಜಂಗುಳಿಯ ಕಣ್ಣಿನ ಕುತೂಹಲವಾಗಿದ್ದರು. ಅದು 'ಸೂಪರ್' ವಾಹಿನಿಯ ವಿನೂತನ ಪ್ರಮೋಷನ್. ಇಂದಿನಿಂದ ರಾತ್ರಿ 10ಕ್ಕೆ ಕಲರ್ಸ್ 'ಸೂಪರ್'ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಪಾಪ ಪಾಂಡು' ಧಾರಾವಾಹಿಗಾಗಿ ಕೈಗೊಂಡ ಈ 'ಹ್ಯೂಮನ್ ಬ್ಯಾನರ್' ಜನರ ಗಮನ ಸೆಳೆಯುವಲ್ಲಿ ಸಫಲವಾಯಿತು.

ಜನರು ಈ ವೇಷಧಾರಿಯನ್ನು 'ಯಾಕಪ್ಪಾ ಬ್ಯಾಂಡೇಜು?' ಎಂದು ಕೇಳಿದರೆ, 'ಹೆಂಡ್ತಿ ಮೇಲಿಂದ ಸೋಫಾ ಮೇಲೆ ಎತ್ತಿ ಬಿಸಾಕಿದ್ಲು' ಎಂಬ ಉತ್ತರ! ಈ ಉತ್ತರದಿಂದ ಜನರೇನೂ ತತ್ತರಗೊಂಡು ನಡುಗಿ ಹೋಗಲಿಲ್ಲ. ಯಾಕಂದ್ರೆ 'ಪಾಂಡು'ವಿನ ಹೆಂಡ್ತಿ 'ಶ್ರೀಮತಿ'ಯ ಟ್ರೇಡ್ ಮಾರ್ಕ್ ಅದು! ಆದ್ರೆ 'Mark of a man' ಎಂಬಂತೆ 'ಪೆಟ್ಟು ತಿಂದ' ಗಂಡಸರ ಪ್ರತಿರೂಪದಂತಿದ್ದ ಈ ವೇಷಧಾರಿಗಳು ಜನರನ್ನು ವಿಶೇಷವಾಗಿ ಸೆಳೆದದ್ದು ಕೇವಲ ಬ್ಯಾಂಡೇಜಿನಿಂದಲ್ಲ, ಮುಖವಾಡದಿಂದಷ್ಟೇ ಅಲ್ಲ! 'ಪಾಪ ಪಾಂಡು' ಶೀರ್ಷಿಕೆ ಗೀತೆ ಧ್ವನಿವರ್ಧಕದಿಂದ ಬರುತ್ತಿತ್ತು. ಜನರಿಗೆ ವರ್ಷಗಳ ಹಿಂದಿನ, ತಮ್ಮ ಸವಿನೆನಪಿನ ಪಾಂಡುವನ್ನು ಆ ಹಾಡು ತಲುಪಿಸುತ್ತಿತ್ತು. ಅದರಲ್ಲೂ 'ಪಾಪ ಪಾಂಡು' ಎಂದು ಆ ಹಾಡಿನ ಕೊನೆಗೆ ಮಗು ಹೇಳಿದಾಗ ಎಲ್ಲರ ಮೊಗದಲ್ಲಿ ನಗೆಮಿಂಚು ಸುಳಿದದ್ದು ಸುಳ್ಳಲ್ಲ.
ಬೆಂಗಳೂರಿನ ಜನನಿಬಿಡ ಜಾಗಗಳಲ್ಲಿ ಕಂಡುಬಂದ ಈ 'ಪಾಪ ಪಾಂಡು' ವೇಷಧಾರಿಗಳ ಜೊತೆ ಜನರು ಫೋಟೋ ತೆಗೆಸಿಕೊಂಡರು. ಸೆಲ್ಫಿ ಕ್ಲಿಕ್ಕಿಸಿದರು. ಫೇಸ್ಬುಕ್ಕಿನಲ್ಲಿ ಹಂಚಿಕೊಂಡರು.

ಬೆಂಗಳೂರಿನ ಮಲ್ಲೇಶ್ವರ, ಕತ್ರಿಗುಪ್ಪೆ, ಬನಶಂಕರಿ, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಬಸವನಗುಡಿ ಮುಂತಾದ ಜಾಗಗಳಲ್ಲಿ ಕಂಡ 'ಪಾಪ ಪಾಂಡು' ತನ್ನ ಕಾರ್ಯಕ್ರಮದ ಕರಪತ್ರಗಳನ್ನು ಹಂಚಿದ. ಈ ವಿನೂತನ ಪ್ರಚಾರ ವಿಧಾನ ಕಳೆದ ಎರಡು ದಿನಗಳಲ್ಲಿ ಲಕ್ಷಾಂತರ ಮಂದಿಯ ಗಮನ ಸೆಳೆಯಿತು. ಇಂದು ಸೋಮವಾರ ಈ 'ಹ್ಯೂಮನ್ ಬ್ಯಾನರ್'ನ ಕೊನೆಯ ದಿನ.

ಇಂಥದ್ದೊಂದು ವಿನೂತನ ಪ್ರಚಾರ ವಿಧಾನ ಕನ್ನಡ ಟಿ.ವಿ. ಲೋಕದಲ್ಲಿ ಪ್ರಪ್ರಥಮ ಬಾರಿಗೆ ಬಳಸಿದ ಶ್ರೇಯ ಕಲರ್ಸ್ 'ಸೂಪರ್' ವಾಹಿನಿಗೆ ಸಲ್ಲುತ್ತದೆ. ಕನ್ನಡ ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿರುವ ಪಾಪ ಪಾಂಡು ಧಾರಾವಾಹಿ ಇಂದು(ಜುಲೈ2) ರಾತ್ರಿ 10ಕ್ಕೆ ಪ್ರಸಾರವಾಗಲಿದೆ. ಧಾರಾವಾಹಿಯನ್ನು ಸಿಹಿಕಹಿ ಚಂದ್ರು ನಿರ್ದೇಶಿಸುತ್ತಿದ್ದು, ಪಾತ್ರವರ್ಗದಲ್ಲಿ ಚಿದಾನಂದ, ಶಾಲಿನಿ, ಅಂಜನ್, ನಂದನ, ಸೌರಭ್ ಕುಲಕರ್ಣಿ, ಶ್ರುತಿ ಮುಂತಾದವರಿದ್ದಾರೆ.
ಅಂದಹಾಗೆ ಈ ಹ್ಯೂಮನ್ ಬ್ಯಾನರ್, ರಾಜ್ಯದ ೨೦೪ ಸ್ಥಳಗಳಲ್ಲಿ ಪ್ರದರ್ಶನ ಕಂಡಿದ್ದು ಪ್ರೇಕ್ಷಕರ ಕುತೂಹಲ ಕೆರಳಿಸಿದ್ದು ಸುಳ್ಳಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT