ಸಿನಿಮಾ ಸುದ್ದಿ

'ಜಂಟಲ್ ಮೆನ್' ಆದ ಪ್ರಜ್ವಲ್ ದೇವರಾಜ್

Sumana Upadhyaya
ನಾಯಕ ನಟ ಪ್ರಜ್ವಲ್ ದೇವರಾಜ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. 
ಇನ್ನೊಂದೆಡೆ ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಜಹಂಸ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಜಂಟಲ್ ಮೆನ್ ನ ಫಸ್ಟ್ ಲುಕ್ ನಾಳೆ ಬಿಡುಗಡೆಯಾಗಲಿದೆ. ನಿದ್ದೆಯ ಅಸ್ವಸ್ಥತೆ ಬಗ್ಗೆ ಕಥೆಯಿರುವ ಚಿತ್ರದ ಟ್ಯಾಗ್ ಲೈನ್ ಒಳಗೊಬ್ಬ ರಾಕ್ಷಸ ಕುಂಭಕರ್ಣ ಎಂಬುದಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ರವಿ ಬಸ್ರೂರ್ ಸಂಗೀತ ಮತ್ತು ಜಗದೀಶ್ ವಾಲಿಯವರ ಛಾಯಾಗ್ರಹಣ ಚಿತ್ರಕ್ಕಿದೆ. 
SCROLL FOR NEXT