ಸುದೀಪ್ 
ಸಿನಿಮಾ ಸುದ್ದಿ

ಬೆಲ್ ಗ್ರೇಡ್ ನಲ್ಲಿ 26 ದಿನಗಳ ಶೂಟಿಂಗ್ ಮುಗಿಸಿದ ಕೋಟಿಗೊಬ್ಬ-3

ಬೆಲ್ ಗ್ರೇಡ್ ನಲ್ಲಿ ಕೋಟಿಗೊಬ್ಬ-3 ಸಿನಿಮಾಗಾಗಿ 26 ದಿನಗಳ ಶೂಟಿಂಗ್ ಮುಗಿಸಿ ಕಿಚ್ಚ ಸುದೀಪ್ ಬೆಂಗಳೂರಿಗೆ ಆಗಮಿಸಿದ್ದಾರೆ.ಈ ವೇಳೆ ತಮ್ಮ...

ಬೆಂಗಳೂರು:  ಬೆಲ್ ಗ್ರೇಡ್ ನಲ್ಲಿ  ಕೋಟಿಗೊಬ್ಬ-3 ಸಿನಿಮಾಗಾಗಿ 26 ದಿನಗಳ ಶೂಟಿಂಗ್ ಮುಗಿಸಿ ಕಿಚ್ಚ ಸುದೀಪ್ ಬೆಂಗಳೂರಿಗೆ ಆಗಮಿಸಿದ್ದಾರೆ.ಈ ವೇಳೆ ತಮ್ಮ ಶೂಟಿಂಗ್ ನ ಅನುಭವವನ್ನು ಹಂಚಿಕೊಂಡಿದ್ದಾರೆ.
ಶೂಟಿಂಗ್ ತುಂಬಾ ಉತ್ತಮವಾಗಿತ್ತು, ಸೂರಪಪ ಬಾಬು ಅವರ ಆತಿಥ್ಯ ಅದ್ಭುತವಾಗಿತ್ತು, ಕಷ್ಟದ ಸ್ಟಂಟ್ ಗಳನ್ನು  ಸ್ಥಳೀಯ ಸ್ಟಂಟ್ ಟೀಮ್ ಮಾಡಿತ್ತು, 26 ದಿನಗಳ ಶೂಟಿಂಗ್ ನಲ್ಲಿ  ಚೇಸಿಂಗ್ ದೃಶ್ಯ ಹಾಗೂ ಪ್ರಮುಖ ಸ್ಟಂಟ್ ಗಳನ್ನು ಚಿತ್ರೀಕರಿಸಲಾಯಿತು. ತಂಡದ ಕೆಲ ಸದಸ್ಯರ ಜೊತೆ ಸುದೀಪ್ ಭಾರತಕ್ಕೆ ವಾಪಾಸಾಗಿದ್ದಾರೆ.
ಉಳಿದ ಸದಸ್ಯರು ಜುಲೈ 13ರಂದು ವಾಪಸಾಗಲಿದ್ದಾರೆ, ಸುದೀಪ್ ಜೊತೆಗೆ ಶಿವ ಕಾರ್ತಿಕ್ ನಿರ್ದೇಶನದ  ಕೋಟಿಗೊಬ್ಬ3 ಸಿನಿಮಾದಲ್ಲಿ ಮಡೋನಾ ಸೆಬಾಸ್ಟಿಯನ್,  ರವಿ ಶಂಕರ್, ಶಾರದಾ ದಾಸ್ ಮತ್ತು ತಬಲ ನಾಣಿ ಮತ್ತಿತರರು ಸೇರಿದಂತೆ 53 ಮಂದಿ ವಿದೇಶಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಸಿನಿಮಾ ತಂಡ ಒಟ್ಟು 36 ದಿನಗಳ ಶೂಟಿಂಗ್ ಪೂರ್ಣಗೊಳಿಸಿದ್ದು, ಬ್ಯಾಂಕಾಕ್ ಮತ್ತು ಮಲೇಶಿಯಾಗಳಲ್ಲಿ ಇನ್ನು 15 ದಿನಗಳ ಶೂಟಿಂಗ್  ನಡೆಯಲಿದೆ. ಉಳಿದ ಚಿತ್ಕೀಕರಣ ಬೆಂಗಳೂರಿನಲ್ಲಿ ನಡೆಯಲಿದೆ,.
ಬೆಲ್ ಗ್ರೇಡ್ ನಿಂದ ಆಗಮಿಸಿರುವ ಸುದೀಪ್ ಚಿರಂಜೀವಿ ಅವರ ಮುಂದಿನ ತೆಲುಗು ಚಿತ್ರ ಸೈ ರಾ ನರಸಿಂಹ ರೆಡ್ಡಿ, ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲು ಸೆಟ್ ಗೆ ತೆರಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT